

ಬನ್ಯುಮಸ್: ಕೆಲ ದಿನಗಳಿಂದ ಇಂಡೋನೇಶಿಯಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 47ಕ್ಕೆ ಏರಿದೆ.
ಜಾವಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಪರಿಣಾಮ ನೂರಕ್ಕೂ ಹೆಚ್ಚು ಮನೆಗಳು ಮಣ್ಣೀನಡಿ ಹೂತುಹೋಗಿವೆ. ಇನ್ನು ಗ್ರಾಮದ 19 ಜನರು ಕಾಣೆಯಾಗಿದ್ದು ಶೋಧಕಾರ್ಯ ಮುಂದುವರೆದಿದೆ.
ಭೂಕುಸಿತದಲ್ಲಿ 47 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಸಂಸ್ಥೆ ವಕ್ತಾರ ಸುಟೋಪೋ ಪುರ್ವೋ ನುಗ್ರೋಹಾ ಸ್ಪಷ್ಟಪಡಿಸಿದ್ದಾರೆ. ಇನ್ನು 15 ಜನರು ನಾಪತ್ತೆಯಾಗಿದ್ದು, 14 ಮಂದಿಗೆ ಗಾಯಗಳಾಗಿವೆ.