ವಿಜ್ಞಾನಿಗಳ ರಕ್ಷಣೆಗಾಗಿ ಮೈನಸ್ 100 ಡಿಗ್ರಿ ವಾತಾವರಣದಲ್ಲಿ ಇಳಿದ ವಿಮಾನ

ವಿಜ್ಞಾನಿಗಳು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಪ್ರತಿಕೂಲ ವಾತಾವರಣ ಉಂಟಾದ ಪರಿಣಾಮ ಅವರನ್ನು ರಕ್ಷಿಸಲು ವಿಮಾನವೊಂದು ಮೈನಸ್ 100 ಡಿಗ್ರಿ ತಾಪಮಾನವಿರುವ ಸೌತ್ ಪೋಲ್ ನಲ್ಲಿ ಇಳಿದಿದೆ...
ಏರ್ ಲಿಫ್ಟ್ ಕಾರ್ಯಾಚರಣೆ ನಿರತ ಬ್ರಿಟನ್ ಸೇನೆಯ ವೈದ್ಯಕೀಯ ವಿಮಾನ (ಸಿಎನ್ ಎನ್ ಚಿತ್ರ)
ಏರ್ ಲಿಫ್ಟ್ ಕಾರ್ಯಾಚರಣೆ ನಿರತ ಬ್ರಿಟನ್ ಸೇನೆಯ ವೈದ್ಯಕೀಯ ವಿಮಾನ (ಸಿಎನ್ ಎನ್ ಚಿತ್ರ)

ದಕ್ಷಿಣ ದ್ರುವ: ವಿಜ್ಞಾನಿಗಳು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಪ್ರತಿಕೂಲ ವಾತಾವರಣ ಉಂಟಾದ ಪರಿಣಾಮ ಅವರನ್ನು ರಕ್ಷಿಸಲು ವಿಮಾನವೊಂದು ಮೈನಸ್ 100 ಡಿಗ್ರಿ ತಾಪಮಾನವಿರುವ  ಸೌತ್ ಪೋಲ್ ನಲ್ಲಿ ಇಳಿದಿದೆ.

ಇಡೀ ಭೂಮಂಡಲದಲ್ಲಿ ಅತ್ಯಂತ ಕಡಿಮೆ ಮತ್ತು ಅಪಾಯಕಾರಿ ತಾಪಮಾನವಿರುವ ದಕ್ಷಿಣ ದ್ರುವ (ಸೌತಪೋಲ್)ದಲ್ಲಿ ಈ ಸಾಹಸಕಾರಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ದಕ್ಷಿಣ ಧ್ರುವದಲ್ಲಿ  ಹವಾಮಾನದ ಕುರಿತ ಸ೦ಶೋಧನೆ ಕೈಗೊಂಡಿರುವ ಸಂಶೋಧಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ದಕ್ಷಿಣ ದ್ರುವದಲ್ಲಿನ ಸಂಶೋಧನಾ ಕೇ೦ದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬ೦ದಿಯನ್ನು  ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇವರ ರಕ್ಷಣೆಗಾಗಿ ಸತತ 10 ಗ೦ಟೆ ಕಾರ್ಯಾಚರಣೆ ನಡೆಸಲಾಗಿತ್ತು.

ಅಪಾಯಕಾರಿ ಮೈನಸ್ ಡಿಗ್ರಿ ತಾಪಮಾನ ವಿರುವ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಯಾವುದೇ ರೀತಿಯ ವಿಮಾನಗಳ ಇಳಿಕೆಗೆ ಅವಕಾಶವಿಲ್ಲ. ಆದರೆ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ  ಅಮುಂಡ್ಸೆನ್-ಸ್ಕಾಟ್ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧಕರಲ್ಲಿ ಕೆಲವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅನಿವಾರ್ಯವಾಗಿ ಈ ಸಾಹಸೀ ಏರ್  ಲಿಫ್ಟ್ ಕಾರ್ಯಾಚರಣೆಗೆ ಮುಂದಾಗಬೇಕಾಯಿತು ಎಂದು ತಿಳಿದುಬಂದಿದೆ.

ಪ್ರಸ್ತುತ ಅನಾರೋಗ್ಯ ಪೀಡಿತ ಸಂಶೋಧಕರನ್ನು ಹೊತ್ತ ವಿಮಾನ ಚಿಲಿಗೆ ಆಗಮಿಸಿದ್ದು, ಅಲ್ಲಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಮೂರನೇ ಬಾರಿಗೆ ಸಾಹಸಮಯ ಏರ್ ಲಿಫ್ಟ್ ಕಾರ್ಯಾಚರಣೆ
ತಜ್ಞರು ತಿಳಿಸಿರುವಂತೆ ಈ ಪ್ರದೇಶಕ್ಕೆ ವಷ೯ದ ಆರು ತಿ೦ಗಳು ಸೂಯ೯ನ ಬೆಳಕೇ ಬರುವುದಿಲ್ಲವಂತೆ. ಚ೦ದ್ರ ಮತ್ತು ನಕ್ಷತ್ರದ ಬೆಳಕು ಮಾತ್ರ ಇಲ್ಲಿರುತ್ತದೆ. ಹವಾಮಾನ ವೈಪರೀತ್ಯ  ಹಿನ್ನೆಲೆಯಲ್ಲಿ ಇ೦ಥ ಪ್ರದೇಶದಲ್ಲಿ ಸಾಮಾನ್ಯವಾಗಿ ವಿಮಾನಗಳು ಇಳಿಯಲು ಸಾಧ್ಯವಿಲ್ಲ. ಆದರೆ ಬ್ರಿಟನ್‍ನ ವಾಯುಪಡೆ ವಿಮಾನವೊ೦ದನ್ನು ಈ ಪ್ರದೇಶದಲ್ಲಿ ಇಳಿಸಿ, ಸಿಬ್ಬ೦ದಿಯನ್ನು  ರಕ್ಷಿಸಿದೆ. ಸೌತ್ ಪೋಲ್‍ನಲ್ಲಿ ವಿಮಾನ ಇಳಿದಿರುವುದು 60 ವಷ೯ಗಳಲ್ಲೇ ಇದು ಮೂರನೇ ಬಾರಿಯಾಗಿದೆ.

ಈ ಹಿ೦ದೆ 1999ರಲ್ಲಿ ಹಾಗೂ 2001ರಲ್ಲಿ ಸ೦ಶೋಧನಾ ಕೇ೦ದ್ರದ ಸಿಬ್ಬ೦ದಿಗೆ ಚಿಕಿತ್ಸೆ ನೀಡುವ ಉದ್ದೇಶಕ್ಕಾಗಿ ಸೌತ್‍ಪೋಲ್‍ನಲ್ಲಿ ವಿಮಾನ ಲ್ಯಾ೦ಡಿ೦ಗ್ ಮಾಡಲಾಗಿತ್ತು. ಇ೦ಥ  ಕಾರ್ಯಾಚರಣೆಗೆ ಕನಿಷ್ಠ ಒ೦ದು ವಾರ ತಯಾರಿ ಬೇಕಾಗುತ್ತದೆ ಎ೦ದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com