ಕಾರು ಚಾಲನೆ ವೇಳೆ ಪ್ರಜ್ಞೆ ತಪ್ಪಿದ ತಾಯಿ: ನಾಲ್ಕು ವರ್ಷದ ಪುತ್ರನಿಂದ ರಕ್ಷಣೆ

ಕಾರು ಚಾಲನೆ ಮಾಡುತ್ತಿದ್ದ ವೇಳೆ ಪ್ರಜ್ಞೆ ಬಿದ್ದಿದ್ದ ತಾಯಿಯನ್ನು 4 ವರ್ಷದ ಬಾಲಕನೊಬ್ಬ ರಕ್ಷಿಸಿರುವ ಘಟನೆಯೊಂದು ಮಂಗಳವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವೆರೇಸ್: ಕಾರು ಚಾಲನೆ ಮಾಡುತ್ತಿದ್ದ ವೇಳೆ ಪ್ರಜ್ಞೆ ಬಿದ್ದಿದ್ದ ತಾಯಿಯನ್ನು 4 ವರ್ಷದ ಬಾಲಕನೊಬ್ಬ ರಕ್ಷಿಸಿರುವ ಘಟನೆಯೊಂದು ಮಂಗಳವಾರ ನಡೆದಿದೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗನೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ತಾಯಿಯನ್ನು ಕಾರಿನಿಂದ ಹೊರೆ ತಂದ ಪುಟ್ಟ ಬಾಲಕ ಆ್ಯಂಬುಲೆನ್ಸ್ ಕರೆ ಮಾಡುವಂತೆ ಸ್ಥಳೀಯರ ಬಳಿ ಕೇಳಿಕೊಂಡಿದ್ದಾನೆ.

ಇದರಂತೆ ತಾಯಿಯನ್ನು ವೆರೇಸ್ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಮಗುವಿನ ಸಮಯ ಪ್ರಜ್ಞೆ ಹಾಗೂ ಆತನ ಸಾಹಸಕ್ಕೆ ಇದೀಗ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಾರಿನ್ನು ಓಡಿಸುತ್ತಿದ್ದ ವೇಳೆ ಮಮ್ನಿ ಇದ್ದಕ್ಕಿದ್ದಂತೆ ಬಿದ್ದುಬಿಟ್ಟರು. ಕಣ್ಣು ಬಿಡುತ್ತಿರಲಿಲ್ಲ ಹೀಗಾಗಿ ಕಾರಿನಿಂದ ಎಳೆದುಕೊಂಡು ಹೊರಗೆ ಹಾಕಿದೆ ಎಂದು ಪುಟ್ಟ ಬಾಲಕ ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com