ಬಾಂಬ್ ದಾಳಿ ಬಳಿಕದ ಸುದ್ದಿಗೋಷ್ಠಿಯಲ್ಲಿ ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ (ರಾಯಿಟರ್ಸ್ ಚಿತ್ರ)
ಬಾಂಬ್ ದಾಳಿ ಬಳಿಕದ ಸುದ್ದಿಗೋಷ್ಠಿಯಲ್ಲಿ ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ (ರಾಯಿಟರ್ಸ್ ಚಿತ್ರ)

ಬಾಂಬ್ ದಾಳಿ ಖಂಡಿಸಿದ ಟರ್ಕಿ ಪ್ರಧಾನಿ; ಇಸಿಸ್ ನಿಂದ ದುಷ್ಕೃತ್ಯ ಎಂದ ಬಿನಾಲಿ ಯಿಲ್ಡ್ರೀಮ್

ಟರ್ಕಿಯ ಅತಾತುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಬಾಂಬ್ ದಾಳಿಯ ಹಿಂದೆ ಇಸಿಸ್ ಕೈವಾಡವಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ ಹೇಳಿದ್ದಾರೆ...

ಇಸ್ತಾನ್ ಬುಲ್: ಟರ್ಕಿಯ ಅತಾತುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಬಾಂಬ್ ದಾಳಿಯ ಹಿಂದೆ ಇಸಿಸ್ ಕೈವಾಡವಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ  ಯಿಲ್ಡ್ರೀಮ್ ಹೇಳಿದ್ದಾರೆ.

ಇಸ್ತಾನ್ ಬುಲ್ ನ ಅತ್ಯಂತ ಜನನಿಭಿಡ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಟ 36 ಮಂದಿ ಸಾವನ್ನಪ್ಪಿ, 150ಕ್ಕೂ ಹೆಚ್ಚು  ಮಂದಿ ಗಾಯಗೊಂಡಿದ್ದರು. ಘಟನೆಯ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ ಘಟನೆಯನ್ನು ತೀವ್ರವಾಗಿ  ಖಂಡಿಸಿದರು. ಅಲ್ಲದೆ ಬಾಂಬ್ ದಾಳಿಯ ಹಿಂದೆ ಐಎಸ್ ಐಎಲ್ ಅಥವಾ ಇಸಿಸ್ ಕೈವಾಡವಿದೆ ಎಂದು ಆರೋಪಿಸಿದರು.

"ಭೀಕರ ಬಾಂಬ್ ದಾಳಿಯ ಹಿಂದೆ ಮೇಲ್ನೋಟಕ್ಕೆ ಇಸ್ಲಾಮಿಕ್ ಉಗ್ರ ಸಂಘಟನೆ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಭದ್ರತಾ ಸಿಬ್ಬಂದಿ  ಪರಿಶೀಲಿಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ. ಡಾಯಿಷ್ ಮೂಲದ ಉಗ್ರ ಸಂಘಟನೆ ಐಎಸ್ ಐಎಲ್ (Islamic State of Iraq of the Levant) ಅಥವಾ ಇಸಿಸ್ ಈ ದಾಳಿ ನಡೆಸಿರುವ  ಶಂಕೆ ಇದೆ. ಭದ್ರತಾ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿನಾಲಿ ಯಿಲ್ಡ್ರೀಮ್ ಹೇಳಿದರು.

ಇನ್ನು ಈ ಭೀಕರ ಬಾಂಬ್ ದಾಳಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಶ್ವಾದ್ಯಂತ ಉಗ್ರರ ಕುಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com