
ಲಾಸ್ ಏಂಜಲೀಸ್: ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದ್ದು, ಬಹುತೇಕರು ಸ್ಮಾರ್ಟ್ ಫೋನ್ ಬಳಸುತ್ತಾರೆ. ಕುಂತಲ್ಲಿ, ನಿಂತಲ್ಲಿ ಅವರಿಗೆ ಫೋನ್ ಕೈಯಲ್ಲಿರಬೇಕು. ಕೆಲವರಂತೂ ಯಾವಾಗಲೂ ಸ್ಮಾರ್ಟ್ ಫೋನ್ ಗಳಲ್ಲಿಯೇ ಮುಳುಗಿರುತ್ತಾರೆ.
ಸ್ಮಾರ್ಟ್ ಫೋನ್ ಮೇಲಿನ ಅತಿಯಾದ ವ್ಯಾಮೋಹದಿಂದ ಕಲಾ ನಿರ್ದೇಶಕನೊಬ್ಬ ಅದರೊಂದಿಗೆ ಮದುವೆಯಾದ ವಿಲಕ್ಷಣ ಘಟನೆ ಲಾಸ್ ವೆಗಾಸ್ ನಲ್ಲಿ ನಡೆದಿದೆ.
ಲಾಸ್ ವೆಗಾಸ್ ಚರ್ಚ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕಲಾ ನಿರ್ದೇಶಕ ಆರೋನ್ ಚೆರ್ವೆನಕ್, ತಾನು ಹೆಚ್ಚಾಗಿ ಪ್ರೀತಿಸುತ್ತಿದ್ದ ಸ್ಮಾರ್ಟ್ ಫೋನ್ ಜೊತೆಗೇ ಮದುವೆಯಾಗಿದ್ದಾರೆ. ಸ್ಮಾರ್ಟ್ ಫೋನ್ ಜೊತೆಗೆ ಸುದೀರ್ಘವಾದ ಸಂಬಂಧವನ್ನು ಹೊಂದಿದ್ದು, ಅದರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇನೆ, ಹೀಗಾಗಿ ಅದನ್ನೇ ವಿವಾಹವಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನನ್ನ ಭಾವನಾತ್ಮಕ ಸಂಬಂಧ ಸ್ಮಾರ್ಟ್ ಫೋನ್ ಜೊತೆಗೆ ಬೆಸೆದುಕೊಂಡಿದ್ದು, ಸಾಂತ್ವನಕ್ಕೂ ನನಗೆ ಫೋನ್ ಸಂಗಾತಿಯಾಗಿದೆ ಎಂದಿದ್ದಾರೆ. ಸ್ಮಾರ್ಟ್ ಫೋನ್ ಹಾಗೂ ಕಲಾ ನಿರ್ದೇಶಕ ಆರೋನ್ ಚೆರ್ವೆನಕ್ ಅವರ ಮದುವೆ ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿದೆ. ಆದರೆ ಈ ಮದುವೆಯನ್ನು ಕಾನೂನು ಬದ್ದ ವಿವಾಹ ಎಂದು ದಾಖಲು ಮಾಡಿಕೊಂಡಿಲ್ಲ.
Advertisement