ಫೋರ್ಬ್ಸ್ ಪಟ್ಟಿಯಲ್ಲಿ ಐವರು ಶ್ರೀಮಂತ ಭಾರತ ನಾರಿಯರು

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ 190 ಮಹಿಳೆಯರ ಪೈಕಿ ಭಾರತದ ಐವರು ಮಹಿಳೆಯರು ಸ್ಥಾನ ಗಳಿಸಿದ್ದಾರೆ....
ಸಾವಿತ್ರಿ ಜಿಂದಾಲ್ ಮತ್ತು ಇಂದೂ ಜೈನ್
ಸಾವಿತ್ರಿ ಜಿಂದಾಲ್ ಮತ್ತು ಇಂದೂ ಜೈನ್

ನ್ಯೂಯಾರ್ಕ್‌ : ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ 190 ಮಹಿಳೆಯರ ಪೈಕಿ ಭಾರತದ ಐವರು ಮಹಿಳೆಯರು ಸ್ಥಾನ ಗಳಿಸಿದ್ದಾರೆ.

ಫೋರ್ಬ್ಸ್‌ ಸಿದ್ಧಪಡಿಸಿರುವ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯರಾದ ಸಾವಿತ್ರಿ ಜಿಂದಾಲ್‌ ಮತ್ತು ಕುಟುಂಬ 453ನೇ ಸ್ಥಾನ ಪಡೆದಿದೆ. ಸಾವಿತ್ರಿ 23,450 ಕೋಟಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ.

ಮಾಧ್ಯಮ ಸಂಸ್ಥೆ ಬೆನ್ನೆಟ್‌, ಕೋಲ್ಮನ್‌ ಅಂಡ್‌ ಕಂಪೆನಿಯ ಅಧ್ಯಕ್ಷೆ ಇಂದೂ ಜೈನ್‌ ಅವರು ಫೋರ್ಬ್ಸ್‌ ಪಟ್ಟಿಯಲ್ಲಿ 549ನೇ ಸ್ಥಾನ ಪಡೆದಿದ್ದಾರೆ. ಗೋದ್ರೆಜ್‌ ಕಂಪೆನಿಯಲ್ಲಿ ಐದನೇ ಒಂದರಷ್ಟು ಪಾಲು ಹೊಂದಿರುವ ಸ್ಮಿತಾ ಕೃಷ್ಣ ಅವರು 810 ನೇ ಸ್ಥಾನದಲ್ಲಿದ್ದರೆ,  ಮಧುಮೇಹ ಮತ್ತು ಹೃದ್ರೋಗದ ಔಷಧ ತಯಾರಕ ಸಂಸ್ಥೆ ಯುಎಸ್‌ವಿಯ  ಲೀನಾ ತಿವಾರಿ ಅವರು ಪಟ್ಟಿಯಲ್ಲಿ 1067ನೇ ಸ್ಥಾನ ಗಳಿಸಿದ್ದಾರೆ.

ವಿದ್ಯುತ್‌ ಉಪಕರಣಗಳ ತಯಾರಕ ಕಂಪೆನಿ ‘ಹ್ಯಾವೆಲ್ಸ್‌ ಇಂಡಿಯ’ದ ದಿವಂಗತ ಖೀಮತ್‌ ರಾಯ್‌ ಗುಪ್ತಾ ಅವರ ಪತ್ನಿ ಅನುರಾಧಾ ವಿನೋದ್‌ ಗುಪ್ತಾ ಅವರು 1577ನೇ ಸ್ಥಾನದಲ್ಲಿದ್ದಾರೆ,

ಈ ಬಾರಿ ಒಟ್ಟು 1,810 ಮಂದಿ ಶತಕೋಟ್ಯಧೀಶರ ಪಟ್ಟಿಯಲ್ಲಿ 190 ಮಂದಿ ಮಹಿಳೆಯರು ಇದ್ದರು. ಆದರೆ 2015ರಲ್ಲಿ 197 ಇದ್ದ ಈ ಸಂಖ್ಯೆ ಈ ಸಲ 190ಕ್ಕೆ ಇಳಿದಿದೆ ಎಂದು ಫೊರ್ಬ್ಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com