ಬ್ಯಾಂಕುಗಳಿಂದ ಐಸಿಎಸ್ ಉಗ್ರಗಾಮಿ ಸಂಘಟನೆಗೆ ಹಣ ಸಂದಾಯ: ಬ್ರಿಟನ್ ಸಂಸದೀಯ ಸಮಿತಿ

ಐಸಿಐ ಮತ್ತು ಐಎಸ್ ಎಲ್ ಭಯೋತ್ಪಾದಕ ಸಂಘಟನೆಗಳು ಯುದ್ಧ ನಡೆಸಲು ವಿದೇಶಿ ಕರೆನ್ಸಿ ಮಾರುಕಟ್ಟೆಗಳಿಂದ ಮಿಲಿಯನ್ ಡಾಲರ್ ಹಣವನ್ನು ಲೂಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಐಸಿಐ ಮತ್ತು ಐಎಸ್ ಎಲ್ ಭಯೋತ್ಪಾದಕ ಸಂಘಟನೆಗಳು ಯುದ್ಧ ನಡೆಸಲು ವಿದೇಶಿ ಕರೆನ್ಸಿ ಮಾರುಕಟ್ಟೆಗಳಿಂದ ಮಿಲಿಯನ್ ಡಾಲರ್ ಹಣವನ್ನು ಲೂಟಿ ಮಾಡುತ್ತದೆ ಎಂಬ ವಿಷಯ ಬಹಿರಂಗಗೊಂಡಿದೆ.

ಐಸಿಐ ಭಯೋತ್ಪಾದಕ ಸಂಘಟನೆ ಇರಾಕ್ ನ ಮೊಸಲ್ ನಗರವನ್ನು  ಒಂದು ತಿಂಗಳಲ್ಲಿ ಸುಮಾರು 14 ದಶಲಕ್ಷ ಪೌಂಡ್ ಹಣವನ್ನು  ಬ್ಯಾಂಕುಗಳಿಂದ ಲೂಟಿ ಮಾಡಿದೆ ಎಂದು ದ ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ವರದಿಯಾಗಿದೆ.

ಇರಾಕ್ ಮತ್ತು ಜೋರ್ಡಾನ್ ಹಣಕಾಸಿನ ಅಧಿಕಾರಿಗಳು ಮೋಸದ ಹಣ ಲೂಟಿ ಜಾಲದಲ್ಲಿ ಸೇರಿಕೊಂಡಿದ್ದಾರೆ. ಇಲ್ಲಿ ಭಾರೀ ಪ್ರಮಾಣದಲ್ಲಿ ಹಗರಣ ನಡೆದಿದೆ ಎಂದು ಲಂಡನ್ ನ ಸಂಸದೀಯ ಸಮಿತಿ ತಿಳಿಸಿದೆ.

ಐಎಸ್ಐ ಮತ್ತು ಐಸಿಎಲ್ ಗಳಿಗೆ ಹೀಗೆ ಬ್ಯಾಂಕುಗಳಿಂದ ಲೂಟಿ ಮಾಡಿದ ಹಣವೇ ಮುಖ್ಯ ಆದಾಯದ ಮೂಲವಾಗಿದ್ದು, ಅದರ ಜೊತೆಗೆ ತೈಲ ಕಳ್ಳಸಾಗಾಟ ಮತ್ತು ಭಯೋತ್ಪಾದಕ ಸಂಘಟನೆಗಳ ಹಿಡಿತವಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಂದ ಹಣವನ್ನು ಹೆದರಿಸಿ ಕಿತ್ತುಕೊಳ್ಳುತ್ತವೆ. ಲಂಡನ್ ಸಂಸತ್ತಿನಲ್ಲಿ ಇದು ಹಗರಣವಾಗಿ ಭಾರೀ ಸುದ್ದಿಯಾಗಿದೆ. ವಿದೇಶಾಂಗ ವ್ಯವಹಾರಗಳ ಉಪಸಮಿತಿ ನಡೆಸಿದ್ದ ವಿಶೇಷ ಸಭೆಯಲ್ಲಿ ಹಗರಣದ ವಿವರ ಹೊರಗೆ ಬಂದಿದೆ.

ಇರಾಕ್ ನ ಮೊಸುಲ್ ನಗರವನ್ನು 2014ರಲ್ಲಿ ಐಸಿಎಲ್ ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯನ್ನು ಐಎಸ್ ಎಲ್ ಸಂಘಟನೆಯ ಮುಖ್ಯಸ್ಥ ಲೂಟಿ ಮಾಡಿದ್ದ, ಆಗ ಅದಕ್ಕೆ 429 ದಶಲಕ್ಷ ಡಾಲರ್ ಹಣ ಸಂದಾಯವಾಗಿದೆ ಎಂಬ ಆರೋಪವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com