ಯೆಮೆನ್ ನಲ್ಲಿ ಗುಂಡಿನ ದಾಳಿ: 4 ಭಾರತೀಯ ನರ್ಸ್ ಸೇರಿ 16 ಮಂದಿ ಹತ್ಯೆ

ದಕ್ಷಿಣ ಯೆಮನ್​ನ ಅಡೆನ್ ನಗರದಲ್ಲಿರುವ ವೃದ್ಧಾಶ್ರಮವೊಂದ ಮೇಲೆ ಬಂದೂಕುಧಾರಿಗಳ ಗುಂಪೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಡೆನ್ (ಯೆಮನ್): ದಕ್ಷಿಣ ಯೆಮನ್​ನ ಅಡೆನ್ ನಗರದಲ್ಲಿರುವ ವೃದ್ಧಾಶ್ರಮವೊಂದ ಮೇಲೆ ಬಂದೂಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಭಾರತೀಯ ನರ್ಸ್ ಗಳು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ.
ಶೇಖ್ ಉಸ್ಮಾನ್ ಜಿಲ್ಲೆಯ ಅಡಿನ್​ನ ನಗರದಲ್ಲಿ ಈ ವೃದ್ಧಾಶ್ರಮವಿದ್ದು, ವೃದ್ದರ ಕೈಗಳನ್ನು ಕಟ್ಟಿ ಹಾಕಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಯೆಮನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಐಸಿಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಈ ಪ್ರದೇಶಗಳಲ್ಲಿ ನಿರಂತರ ದಾಳಿ ನಡೆಸುತ್ತಿದ್ದು. ಕಳೆದ ವರ್ಷ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಗವರ್ನರ್ ಸೇರಿದಂತೆ ಹಲವರ ಹತ್ಯೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com