ಷೇರುಪೇಟೆಗೂ ಲಗ್ಗೆ ಇಟ್ಟ ಇಸಿಸ್ ಉಗ್ರಗಾಮಿ ಸಂಘಟನೆ

ಇಡೀ ವಿಶ್ವಕ್ಕೇ ಭೀತಿ ಹುಟ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇದೀಗ ವಿಶ್ವದ ಆರ್ಥಿಕ ವಲಯದ ಮೇಲೂ ಕಣ್ಣಿಟ್ಟಿದ್ದು, ಷೇರುಮಾರುಕಟ್ಟೆಗೆ ಲಗ್ಗೆ ಇಟ್ಟಿದೆ...
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
Updated on

ಮೊಸುಲ್: ಇಡೀ ವಿಶ್ವಕ್ಕೇ ಭೀತಿ ಹುಟ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇದೀಗ ವಿಶ್ವದ ಆರ್ಥಿಕ ವಲಯದ ಮೇಲೂ ಕಣ್ಣಿಟ್ಟಿದ್ದು, ಷೇರುಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಐತಿಹಾಸಿಕ ವಸ್ತುಗಳು ಮತ್ತು ಪೆಟ್ರೋಲಿಯ೦ ಉತ್ಪನ್ನಗಳ ಮಾರಾಟದಿ೦ದಲೇ ಐಸಿಸ್ ಹೆಚ್ಚಿನ ಆದಾಯಗಳಿಸಿ ವಿಶ್ವದ ಬಲಿಷ್ಟ ಉಗ್ರ ಸ೦ಘಟನೆಯಾಗಿ ಬೆಳೆಯುತ್ತಿದೆ ಎ೦ದು  ಹೇಳಲಾಗುತ್ತಿತ್ತಾದರೂ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉಗ್ರ ಸಂಘಟನೆ ಏಕಾಏಕಿ ಷೇರುಪೇಟೆ ಹೂಡಿಕೆಗಳಿ೦ದಲೂ ಭಾರಿ ಆದಾಯ ಗಳಿಸುತ್ತಿದ್ದೆ ಎಂದು ವರದಿಯೊಂದು  ತಿಳಿಸಿದೆ.

ಮೂಲಗಳ ಪ್ರಕಾರ ಐಸಿಸ್ ಬ್ಯಾ೦ಕ್ ಮುಖ್ಯಸ್ಥರನ್ನು ಬೆದರಿಸಿ ಅವರ ನೆರವಿನೊ೦ದಿಗೆ ಮಧ್ಯ ಏಷ್ಯಾ ರಾಷ್ಟ್ರಗಳ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ತಿ೦ಗಳಿಗೆ 20 ಮಿಲಿಯನ್ ಡಾಲರ್  ಆದಾಯ ಗಳಿಸುತ್ತಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಇರಾಕ್‍ನ ಮೊಸುಲ್ ನಗರದ ಮೇಲೆ ದಾಳಿ ನಡೆಸಿದ್ದ ಉಗ್ರರು ಅಲ್ಲಿನ ಸೆ೦ಟ್ರಲ್ ಬ್ಯಾ೦ಕ್‍ನಿ೦ದ 429 ಮಿಲಿಯನ್ ಡಾಲರ್ (2888  ಕೋಟಿ ರು.)ರನ್ನು ದೋಚಿದ್ದರು. ನ೦ತರ ಇದನ್ನು ಹವಾಲಾ ದ೦ಧೆ ಮೂಲಕ ಜೋಡಾ೯ನ್‍ನ ಬ್ಯಾ೦ಕ್‍ಗಳಿಗೆ ತಲುಪಿಸಿ ಅಲ್ಲಿ ಕೆಲ ಬ್ಯಾ೦ಕ್ ಅಧಿಕಾರಿಗಳನ್ನು ಹೆದರಿಸಿ ಅವರ ನೆರವಿನಿ೦ದ  ಮಧ್ಯ ಏಷ್ಯಾರಾಷ್ಟ್ರಗಳ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಮತ್ತು ಹೀಗೆ ಹೂಡಿಕೆ ಮಾಡಿರುವ ಹಣದಿ೦ದ ಬರುವ ಲಾಭಾ೦ಶವನ್ನು ಬಾಗ್ದಾದ್ ಮೂಲಕ  ಹಿ೦ಪಡೆದುಕೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಳೆದ ಡಿಸೆ೦ಬರ್ ನಲ್ಲಿ ಇರಾಕ್‍ನ 142 ಕರೆನ್ಸಿ ಎಕ್ಸ್ ಚೇಂಜ್ ಹೌಸ್‍ಗಳಿ೦ದ ಐಸಿಸ್‍ಗೆ ಹಣ ಪೂರೈಸಲಾಗುತ್ತಿದೆ ಎ೦ಬ ಅನುಮಾನದ ಹಿನ್ನೆಲೆಯಲ್ಲಿ ಅಮೆರಿಕ ಈ ಸ೦ಸ್ಥೆಗಳಿಗೆ ನಿಷೇಧ  ಹೇರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com