ಪಾಕ್ ನಿಯಂತ್ರಿಸಲು ಆಫ್ಘನ್ ನಲ್ಲಿ ಅಮೆರಿಕ ಸೇನೆ ಇರಬೇಕು: ಟ್ರಂಪ್

ಪಾಕಿಸ್ತಾನವನ್ನು ನಿಯಂತ್ರಿಸಬೇಕು ಎಂದರೆ ಅದರ ನೆರೆಯ ರಾಷ್ಟ್ರ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯನ್ನು ಇರಿಸಬೇಕು ಎಂದು ಅಮೆರಿಕ ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ...
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
Updated on

ವಾಷಿ೦ಗ್ಟನ್: ಪಾಕಿಸ್ತಾನವನ್ನು ನಿಯಂತ್ರಿಸಬೇಕು ಎಂದರೆ ಅದರ ನೆರೆಯ ರಾಷ್ಟ್ರ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯನ್ನು ಇರಿಸಬೇಕು ಎಂದು ಅಮೆರಿಕ ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿ  ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚುನಾವಣಾ ನಿಮಿತ್ತ ನಡೆದ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಡೊನಾಲ್ಡ್ ಟ್ರಂಪ್, "ಪಾಕಿಸ್ತಾನದ ಬಳಿ ಅಣ್ವಸ್ತವಿರುವುದರಿ೦ದ ಅದನ್ನು ರಕ್ಷಣೆ ಮತ್ತು ನಿಯಂತ್ರಣ ಸವಾಲನ ಕೆಲಸವಾಗಿದೆ.  ಯಾವುದೇ ಕ್ಷಣದಲ್ಲಿ ಪಾಕಿಸ್ತಾನಕ್ಕೆ ಅಪಾಯ ಎದುರಾಗಬಹದು. ಹೀಗಾಗಿ ಅಪ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆಯನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ಕಣದಲ್ಲಿರುವ ಡೊನಾಲ್ಡ್ ಟ್ರ೦ಪ್, ಮೊದಲಿನಿಂದಲೂ ಪಾಕಿಸ್ತಾನದ ಬಗೆಗಿನ ಹೇಳಿಕೆ ನೀಡುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ಪ್ರಮುಖವಾಗಿ  ಅಮೆರಿಕ ಮುಸ್ಲಿಮರ ಕುರಿತು ಟ್ರಂಪ್ ನೀಡಿದ್ದ ಹೇಳಿಕೆ ಅಮೆರಿಕ ರಾಜಕೀಯವಲಯದಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಪಾಕಿಸ್ತಾನ ಸಂಬಂಧವೂ ಟ್ರಂಪ್ ನೀಡಿದ್ದ ಹೇಳಿಕೆ ಪಾಕಿಸ್ತಾನದ  ಮುಂಜುಗರಕ್ಕೆ ಕಾರಣವಾಗಿತ್ತು. "ಪಾಕಿಸ್ತಾನ ಅತ್ಯ೦ತ ಅಪಾಯಕಾರಿ ರಾಷ್ಟ್ರ. ಪಾಕ್‍ನಲ್ಲಿರುವ ಅಣ್ವಸ್ತ್ರಗಳನ್ನು ನಾಶ ಮಾಡಬೇಕು. ಇದಕ್ಕಾಗಿ ಭಾರತವನ್ನು ಬಳಸಿಕೊಳ್ಳಬೇಕು" ಎ೦ದು  ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಎಚ್1ಬಿ ವೀಸಾ ನಿಲುವು ಬದಲು
ಎಚ್1ಬಿ ವೀಸಾ ಸ೦ಬ೦ಧ ನಿಲುವನ್ನು ಬದಲಿಸಿರುವ ಟ್ರ೦ಪ್, ಅಮೆರಿಕಕ್ಕೆ ಕುಶಲ ಕೆಲಸಗಾರರು ಬೇಕಿದ್ದಾರೆ. ಆದರೆ ಇವರು ಅಮೆರಿಕದಲ್ಲಿ ಲಭ್ಯವಿಲ್ಲದಿದ್ದರೆ ವಿದೇಶಗಳಿ೦ದ ಕರೆತರುತ್ತೇವೆ  ಎ೦ದು ಹೇಳಿದ್ದಾರೆ. ಈ ಹಿ೦ದೆ ಅಮೆರಿಕದ ಕೆಲಸ ಕಸಿಯುವ ಭಾರತೀಯರು ಮತ್ತು ಚೀನೀಯರನ್ನು ದೇಶದಿ೦ದ ಓಡಿಸಬೇಕು ಎ೦ದು ಟ್ರ೦ಪ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.  ಅಂತೆಯೇ ವಿದೇಶಗಳಿ೦ದ ಕೆಲಸಗಾರರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಅನುವು ಮಾಡುವ ಎಚ್1ಬಿ ವೀಸಾ ನೀತಿಯನ್ನು ಹಿ೦ಪಡೆಯುವುದಾಗಿಯೂ ಅವರು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com