ಲಿಬಿಯಾದಲ್ಲಿ ಟ್ಯುನಿಷಿಯಾ ಯೋಧರ ಮೇಲೆ ಉಗ್ರರ ದಾಳಿ; ಕನಿಷ್ಠ 53 ಸಾವು

ಲಿಬಿಯಾದಲ್ಲಿ ಇಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಲಿಬಿಯಾ ಗಡಿಯಲ್ಲಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಟ್ಯುನೀಷಿಯಾ ಯೋಧರ ಮೇಲೆ ದಾಳಿ ಮಾಡಿದ್ದಾರೆ...
ಇಸಿಸ್ ದಾಳಿ (ಸಂಗ್ರಹ ಚಿತ್ರ)
ಇಸಿಸ್ ದಾಳಿ (ಸಂಗ್ರಹ ಚಿತ್ರ)

ಟ್ರಿಪೋಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಲಿಬಿಯಾ ಗಡಿಯಲ್ಲಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಟ್ಯುನೀಷಿಯಾ ಯೋಧರ ಮೇಲೆ ದಾಳಿ ಮಾಡಿದ್ದಾರೆ.

ಇಸಿಸ್ ಉಗ್ರರ ಈ ಭೀಕರ ದಾಳಿಯಲ್ಲಿ ನಾಗರಿಕರು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರಿ ಸಂಖ್ಯೆಯಲ್ಲಿದ್ದ ಇಸಿಸ್ ಉಗ್ರರು ಕ್ಷಣ ಮಾತ್ರದಲ್ಲಿ ಯೋಧರ  ಕ್ಯಾಂಪ್ ಗಳ ಮೇಲೆ ಗುಂಡಿನ ಸುರಿಮಳೆ ಗೈದಿದ್ದು, ಉಗ್ರರ ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಯೋಧರು ಅಕ್ಕಪಕ್ಕದ ಮನೆಗಳ ಅಟ್ಟ ಮತ್ತು ಗೋಡೆಗಳ ಹಿಂದೆ ಅವಿತುಕೊಳ್ಳುತ್ತಿದ್ದುದು  ಸಾಮಾನ್ಯಾವಾಗಿತ್ತು. ಆದರೆ ನೋಡನೋಡುತ್ತಿದ್ದಂತೆಯೇ ಉಗ್ರರ ಈ ಪೈಶಾಚಿಕ ಕೃತ್ಯಕ್ಕೆ 53 ಮಂದಿ ಬಲಿಯಾಗಿದ್ದಾರೆ.

ಲಿಬಿಯಾ-ಟ್ಯುನೀಷಿಯಾದ ಗಡಿ ಭಾಗದಲ್ಲಿರುವ ಬೆನ್ ಗಾರ್ಡನ್ ನಗರದ ಬೀಚ್ ರೆಸಾರ್ಟ್ ಬಳಿ ಈ ಘಟನೆ ನಡೆದಿದ್ದು, ಪ್ರಸ್ತುತ ಗಡಿಗೆ ಸಂಪರ್ಕ ಕಲ್ಪಿಸುವ ಡ್ಜರ್ಬಾ ನಗರದ ಗಡಿ ರಸ್ತೆಗಳನ್ನು  ಮುಚ್ಚಲಾಗಿದೆ. ಅಲ್ಲದೆ ಸ್ಥಳದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಗಡಿಯಿಂದ ಹೊರಹೋಗುವ ಮತ್ತು ಒಳ ಬರುವ ಎಲ್ಲ ವಾಹನಗಳಿಗೆ ತಡೆ ನೀಡಲಾಗಿದೆ.

ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ "ಹತ್ತಾರು ಸಂಖ್ಯೆಯಲ್ಲಿದ್ದ ಶಸ್ತ್ರಸಜ್ಜಿತ ಉಗ್ರರು ಏಕಾಏಕಿ ಗುಂಡಿನ ಸುರಿಮಳೆ ಗೈದರು. ಅವರು ನಾವು ಇಸ್ಲಾಮಿಕ್ ಸ್ಟೇಟ್ ನ ಯೋಧರಾಗಿದ್ದು, ತಮ್ಮ ವಿರುದ್ಧ  ಪಿತೂರಿ ನಡೆಸುತ್ತಿರುವ ಶತ್ರುಗಳ ವಿರುದ್ಧ ಕಾದಾಡಲು ಬಂದಿದ್ದೇವೆ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಅಲ್ಲಗೆ ದಾಳಿ ಬಳಿಕ ಗಡಿ ಮೂಲಕವಾಗಿ ಓಡಿ ಹೋದರು ಎಂದು ಹೇಳಿದ್ದಾರೆ.

ಘಟನೆ ನಡೆದ ಸುಮಾರು 20 ಗಂಟೆಗಳೇ ಕಳೆದರೂ ಈವರೆಗೂ ಯಾವುದೇ ಉಗ್ರ ಸಂಘಟನೆ ಘಟನೆಯ ಜವಾಬ್ದಾರಿ ಹೊತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com