ಯುಎಸ್ ವಾಯು ದಾಳಿಯಲ್ಲಿ ಇಸಿಸ್ ಕಮಾಂಡರ್ ಹತ್ಯೆ

ಇಸ್ಲಾಮಿಕ್ ಸ್ಟೇಟ್ ಇರಾಕ್ ಅ್ಯಂಡ್ ಇರಾನ್ ಉಗ್ರ ಸಂಘಟನೆಯ 'ಯುದ್ಧಮಂತ್ರಿ' ಎಂದೇ ಹೆಸರು ಮಾಡಿದ್ದ ಇಸಿಸ್ ಕಮಾಂಡರ್ ಅಬು ಒಮರ್ ಅಲ್ ಶಿಶಾನಿಯನ್ನು ಸಿರಿಯಾದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ...
ಯುಎಸ್ ವಾಯು ದಾಳಿಯಲ್ಲಿ ಇಸಿಸ್ ಕಮಾಂಡರ್ ಹತ್ಯೆ
ಯುಎಸ್ ವಾಯು ದಾಳಿಯಲ್ಲಿ ಇಸಿಸ್ ಕಮಾಂಡರ್ ಹತ್ಯೆ

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಇರಾಕ್ ಅ್ಯಂಡ್ ಇರಾನ್ ಉಗ್ರ ಸಂಘಟನೆಯ 'ಯುದ್ಧಮಂತ್ರಿ' ಎಂದೇ ಹೆಸರು ಮಾಡಿದ್ದ ಇಸಿಸ್ ಕಮಾಂಡರ್ ಅಬು ಒಮರ್ ಅಲ್ ಶಿಶಾನಿಯನ್ನು ಸಿರಿಯಾದಲ್ಲಿ ಹತ್ಯೆ  ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಿರಿಯಾ ಮೇಲೆ ಯುಎಸ್ ಸಿಬ್ಬಂದಿಗಳು ನಿನ್ನೆ ನಡೆಸಿದ ವಾಯು ದಾಳಿಯಲ್ಲಿ ಅಬು ಒಮರ್ ಅಲ್ ಶಿಶಾನಿಯನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆ ಇಸಿಸ್ ವಿರುದ್ಧ ದಾಳಿಯಲ್ಲಿ ನಡೆಸಲಾದ ದೊಡ್ಡ ವಿಜಯವಾಗಿದೆ  ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

 ಅಬು ಒಮರ್ ಅಲ್ ಶಿಶಾನಿ ವಾರೆಂಟ್ ಲಿಸ್ಟ್ ನಲ್ಲಿದ್ದನು. ಈತನನ್ನು ಹಿಡಿಯಲು ಹಲವು ಬಾರಿ ಯತ್ನ ನಡೆಸಿತ್ತು. ಆದರೆ, ಇದೀಗ ಆತನನ್ನು ಹತ್ಯೆಮಾಡುವಲ್ಲಿ ಸೇನೆ ಯಶಸ್ವಿಯಾಗಿದೆ. ಶಿಶಾನಿ ಬಗ್ಗೆ ಮಾಹಿತಿ  ನೀಡಿದವರಿಗೆ ಸರ್ಕಾರ 5 ಮಿಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಅಮೆರಿಕ ಸರ್ಕಾರ ಘೋಷಣೆ ಮಾಡಿದೆ.

1986ರಲ್ಲಿ ಸೋವಿಯತ್ ಯೂನಿಯನ್ ಭಾಗವಾಗಿದ್ದ ಜಾರ್ಜಿಯಾದಲ್ಲಿ ಹುಟ್ಟಿದ್ದ ಅಬು ಒಮರ್, ಇಸಿಸ್ ನಾಯಕ ಅಬು ಬಕಲ್ ಅಲ್ ಬಾಗ್ದಾದಿಗೆ ಮಿಲಿಟರಿ ಮಾರ್ಗದರ್ಶಕನಾಗಿ ಕೆಲಸ ಮಾಡಿದ್ದ. ಅಲ್ಲದೆ, ಇಸಿಸ್ ನ  ಯುದ್ಧಮಂತ್ರಿ ಎಂದೇ ಹೆಸರು ಮಾಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com