ಪಾಕ್ ಗೆ ಯುದ್ಧ ವಿಮಾನ ಮಾರಾಟ ವಿರೋಧಿ ನಿರ್ಣಯ ಅಮೆರಿಕ ಸೆನೆಟ್ ನಲ್ಲಿ ತಿರಸ್ಕೃತ

ಪಾಕಿಸ್ತಾನಕ್ಕೆ ಎಫ್-16 ಯುದ್ಧವಿಮಾನಗಳನ್ನು ಪೂರೈಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದ ನಿರ್ಣಯವನ್ನು ಅಮೆರಿಕ ಸೆನೆಟ್ ತಿರಸ್ಕರಿಸಿದೆ.
ಪಾಕ್ ಗೆ ಯುದ್ಧ ವಿಮಾನ ಮಾರಾಟ ವಿರೋಧಿ ನಿರ್ಣಯ ಅಮೆರಿಕ ಸೆನೆಟ್ ನಲ್ಲಿ ತಿರಸ್ಕೃತ
ಪಾಕ್ ಗೆ ಯುದ್ಧ ವಿಮಾನ ಮಾರಾಟ ವಿರೋಧಿ ನಿರ್ಣಯ ಅಮೆರಿಕ ಸೆನೆಟ್ ನಲ್ಲಿ ತಿರಸ್ಕೃತ

ವಾಷಿಂಗ್ ಟನ್: ಪಾಕಿಸ್ತಾನಕ್ಕೆ ಎಫ್-16 ಯುದ್ಧವಿಮಾನಗಳನ್ನು ಪೂರೈಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದ ನಿರ್ಣಯವನ್ನು ಅಮೆರಿಕ ಸೆನೆಟ್ ತಿರಸ್ಕರಿಸಿದೆ.
ಸೆನೆಟ್ ನಲ್ಲಿ ನಿರ್ಣಯದ ವಿರುದ್ಧ ಮೂರನೇ ಎರಡರಷ್ಟು ಮತ ಚಲಾವಣೆಯಾಗಿದ್ದು, ನಿರ್ಣಯವನ್ನು ತಿರಸ್ಕರಿಸಲಾಗಿದೆ. ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನ ಮಾರಾಟ ಮಾಡುವುದನ್ನು ವಿರೋಧಿಸಿ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ರಿಪಬ್ಲಿಕನ್ ನ ಸಂಸದ  ರಾಂಡ್ ಪೌಲ್ ಮಂಡಿಸಿದ ನಿರ್ಣಯದ ವಿರುದ್ಧ ಮತಚಲಾವಣೆಯಾಗಿದೆ.
ಪಾಕಿಸ್ತಾನಕ್ಕೆ ಮಾರಾಟ ಮಾಡಲಾಗುವ ಎಫ್-16 ಯುದ್ಧ ವಿಮಾನಗಳು ಭಯೋತ್ಪಾದನೆ ವಿರುದ್ಧ ಬಳಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತ, ಫೆ.12 ರಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.  ಒಬಾಮ ಆಡಳಿತದ ನಿರ್ಧಾರಕ್ಕೆ ಅಮೆರಿಕ ಕಾಂಗ್ರೆಸ್ ನ ಸದಸ್ಯರು ಹಾಗೂ ಭಾರತದಿಂದಲೂ ಅಸಮಾಧಾನ ವ್ಯಕ್ತವಾಗಿತ್ತು.   
ಸೆನೆಟ್ ನ ವಿದೇಶಾಂಗ ಸಮಿತಿಯ ಅಧ್ಯಕ್ಷ ಸ್ಥಾನದ ಪ್ರಭಾವ ಬಳಸಿ ಯುಎಸ್ ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನ ಪೂರೈಕೆ ಮಾಡದೇ ಇರುವಂತೆ ತಡೆಯುತ್ತೇನೆ ಎಂದು ರಿಪಬ್ಲಿಕನ್ ಸೆನೆಟ್ ಸದಸ್ಯ ಬಾಬ್ ಕಾರ್ಕೆರ್ ಈ ಹಿಂದೆ ಭರವಸೆ ನೀಡಿದ್ದರು. ಪಾಕಿಸ್ತಾನಕ್ಕೆ ಯುದ್ಧ ವಿಮಾನ ಪೂರೈಕೆ ಮಾಡದೇ ಇರುವ ನಿರ್ಣಯದ ಬಗ್ಗೆ ಸೆನೆಟ್ ನಲ್ಲಿ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com