ಬೆಲ್ಜಿಯಂ ವಿಮಾನ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟ; 13 ಸಾವು, ಹಲವರಿಗೆ ಗಾಯ

ಬೆಲ್ಜಿಯಂ ದೇಶದ ರಾಜಧಾನಿ ಬ್ರುಸೆಲ್ಸ್ ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ...
ಬೆಲ್ಜಿಯಂ ವಿಮಾನ ನಿಲ್ದಾಣದಲ್ಲಿ ಸ್ಫೋಟ(ಚಿತ್ರಕೃಪೆ: ಟ್ವಿಟರ್)
ಬೆಲ್ಜಿಯಂ ವಿಮಾನ ನಿಲ್ದಾಣದಲ್ಲಿ ಸ್ಫೋಟ(ಚಿತ್ರಕೃಪೆ: ಟ್ವಿಟರ್)

ಬ್ರುಸೆಲ್ಸ್: ಬೆಲ್ಜಿಯಂ ದೇಶದ ರಾಜಧಾನಿ ಬ್ರುಸೆಲ್ಸ್ ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಝಾವೆಂಟಮ್ ವಿಮಾನ ನಿಲ್ದಾಣದ ಡಿಪಾರ್ಚರ್ ಹಾಲ್ ನಲ್ಲಿ ಮೊದಲ ಸ್ಫೋಟದ ಶಬ್ದ ಕೇಳಿಬಂದಿದ್ದು, ಅಮೆರಿಕನ್ ಏರ್ ಲೈನ್ಸ್ ಸಂಸ್ಥೆಯ ಚೆಕ್ ಇನ್ ಪ್ರದೇಶದಲ್ಲಿ ಮತ್ತೊಂದು ಸ್ಫೋಟದ ಶಬ್ದ  ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಪ್ರಸ್ತುತ ಘಟನೆಯನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಫೋಟದ ವಿಡಿಯೋಗಳು ವಿಮಾನ ನಿಲ್ದಾಣದ ಸುತ್ತಮುತ್ತ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಸ್ಫೋಟದ ಶಬ್ದ ಕೇಳುತ್ತಿದ್ದಂತೆಯೇ ಅಲ್ಲಿದ್ದ ಪ್ರಯಾಣಿಕರು ಓಡಿ ಹೋಗುತ್ತಿದ್ದ ದೃಶ್ಯ  ಸಾಮಾನ್ಯವಾಗಿದೆ. ಸಿಸಿಟಿವಿ ವಿಡಿಯೋಗಳನ್ನು ಅವಲೋಕಿಸಿದರೆ ಪ್ರಬಲ ಸ್ಫೋಟಸಂಭವಿಸಿದ್ದು, ಘಟನೆಯಲ್ಲಿ ಹಲವರ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಫೋಟ ಸಂಭವಿಸಿ ವಿಮಾನ  ನಿಲ್ದಾಣದಾದ್ಯಂತ ದಟ್ಟ ಹೊಗೆ ಅವರಿಸಿದ್ದು, ಪ್ರಾಣ ಭೀತಿಯಿಂದ ಜನರು ಓಡಿ ಹೋಗುತ್ತಿದ್ದಾರೆ.

ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ನಿಲ್ದಾಣದಲ್ಲಿ ಮತ್ತಷ್ಟು ಜೀವಂತ ಬಾಂಬ್ ಗಳಿರುವ ಕುರಿತು  ಶಂಕೆ ವ್ಯಕ್ತವಾಗುತ್ತಿದ್ದು, ಈ ಬಗೆ ಭದ್ರತಾ ಸಿಬ್ಬಂದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸ್ತುತ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com