'ಡೊನಾಲ್ಡ್ ಟ್ರಂಪ್ ಗೆ ಅಧ್ಯಕ್ಷಗಿರಿ ಮತ್ತೊಂದು 9/11 ಕ್ಕೆ ಮುನ್ನುಡಿ'

ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾದರೆ ಅದು ಮತ್ತೊಂದು 9 /11 ಕ್ಕೆ ಕಾರಣವಾಗಲಿದೆ ಎಂದು ಸೌತ್ ಕೆರೊಲಿನಾದ ಸೆನೆಟ್ ಸದಸ್ಯರಾದ ಲಿಂಡ್ಸೆ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌

ವಾಷಿಂಗ್ ಟನ್: ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾದರೆ ಅದು ಮತ್ತೊಂದು 9 /11 ಕ್ಕೆ ಕಾರಣವಾಗಲಿದೆ ಎಂದು ಸೌತ್ ಕೆರೊಲಿನಾದ ಸೆನೆಟ್ ಸದಸ್ಯರಾದ ಲಿಂಡ್ಸೆ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಕುರಿತು ಮಾಜಿ ಸ್ಪೀಕರ್ ಬೋನರ್ ಅವರ ಡೊಲಾಲ್ಡ್ ಟ್ರಂಪ್ ಪರವಾದ ಹೇಳಿಕೆ ಕುರಿತು 'ಫೇಸ್ ಆಫ್ ದಿ ನೇಷನ್' ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿರುವ ಸೆನೆಟ್ ಸದಸ್ಯರಾದ ಲಿಂಡ್ಸೆ ಗ್ರಹಾಂ, ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿ ಅಪಾಯಕಾರಿಯಾಗಿರುವುದರಿಂದ ಅವರನ್ನು ಸೋಲಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
"ರಿಪಬ್ಲಿಕನ್ ಪಕ್ಷದಲ್ಲಿ ಅಂತರ್ಯುದ್ಧ ನಡೆಯುತ್ತಿದ್ದು ಪಕ್ಷದಲ್ಲೇ ಇರುವ ಕೆಲವು ಡೊನಾಲ್ಡ್ ಟ್ರಂಪ್ ಅವರನ್ನು ವಿರೋಧಿಸುತ್ತಿದ್ದಾರೆ, ಮತ್ತೆ ಕೆಲವರು ಡೊನಾಲ್ಡ್ ಟ್ರಂಪ್ ಅವರ ಪರವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿ ಪ್ರತ್ಯೇಕತಾವಾದದಿಂದ ಕೂಡಿದ್ದು ಟ್ರಂಪ್ ಅಧ್ಯಕ್ಷಗಿರಿ ಮತ್ತೊಂದು 9 /11 ರಲ್ಲಿ ಕೊನೆಯಾಗಲಿದೆ ಎಂದು ಗ್ರಹಾಂ ಎಚ್ಚರಿಸಿದ್ದಾರೆ". ಇಂಡಿಯಾನಾದಲ್ಲಿ ಮೇ.3 ರಂದು ನಡೆಯಲಿರುವ ಪ್ರೈಮರಿ ಚುನಾವಣೆ ಟ್ರಂಪ್ ವಿರೋಧಿ ಬಣಕ್ಕೆ ಪ್ರಮುಖವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com