ಭಾರತದಲ್ಲಿ ಉಸಿರಾಡಲು ಶುದ್ಧ ಗಾಳಿ ಮಾರಲಿದೆ ಕೆನಡಾ

ಇತ್ತ ಕೆನಾಡಾ ಭಾರತದ ಪರಿಸ್ಥಿತಿಯನ್ನು ಮನಗಂಡು ಉಸಿರಾಡಲಿರುವ ಶುದ್ಧ ವಾಯುವನ್ನು ಭಾರತದಲ್ಲಿ ಮಾರಾಟ ಮಾಡಲು ಕಾರ್ಯ ತಂತ್ರ ರೂಪಿಸಿದೆ. ಕೆನಡಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಉಸಿರಾಡುವ ಗಾಳಿಗೆ ದುಡ್ಡು ಕೊಡಬೇಕಾ? ಹೌದು, ಉಸಿಡಾಡಲು ಬೇಕಾದ ಶುದ್ಧ ಗಾಳಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಭಾರತಕ್ಕೆ ಬರಲಿದೆ. ದೆಹಲಿಯಲ್ಲಿ ಈಗಾಗಲೇ ವಾಯುಮಾಲಿನ್ಯ ಜಾಸ್ತಿಯಾಗುತ್ತಿತ್ತು, ಭಾರತದಲ್ಲಿ ಇದೇ ರೀತಿ ವಾಯು ಮಾಲಿನ್ಯ ಮುಂದುವರಿದರೆ, ಉಸಿರಾಡಲು ಗಾಳಿಯನ್ನು ದುಡ್ಡು ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ ಅಂತಾರೆ ತಜ್ಞರು.
ಇತ್ತ ಕೆನಾಡಾ ಭಾರತದ ಪರಿಸ್ಥಿತಿಯನ್ನು ಮನಗಂಡು ಉಸಿರಾಡಲಿರುವ ಶುದ್ಧ ವಾಯುವನ್ನು ಭಾರತದಲ್ಲಿ ಮಾರಾಟ ಮಾಡಲು ಕಾರ್ಯ ತಂತ್ರ ರೂಪಿಸಿದೆ. ಕೆನಡಾದ ವಿಟಾಲಿಟಿ ಏರ್ ಎಂಬ ಕಂಪನಿ ಭಾರತಕ್ಕೆ ಶುದ್ದಗಾಳಿ ಮಾರಲು ತೀರ್ಮಾನಿಸಿದ್ದು, ಒಂದು ಉಚ್ವಾಸಕ್ಕೆ (ಗಾಳಿಯನ್ನು ಒಳಗೆ ಸೇವಿಸಿಕೊಳ್ಳುವುದು) ರು. 12.50 ಪೈಸೆಯೆಂಬಂತೆ ಮಾರಲಿದೆ. 
ಪ್ರಸ್ತುತ ಕಂಪನಿ ಈಗಾಗಲೇ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಶುದ್ಧವಾಯ ಮಾರಾಟ ಮಾಡುತ್ತಿದೆ. ಕಂಪನಿಯ ಸ್ಥಾಪಕ ಮೋಸೆಸ್ ಲ್ಯಾಮ್ ಏನಾದರೂ ವಿಶೇಷವಾದುದು ಮಾಡಬೇಕು ಎಂದು ಹೊರಟು, ಕ್ಯಾನ್‌ಗಳಲ್ಲಿ ಶುದ್ಧ ಗಾಳಿ ಮಾರುವ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈ ಕಂಪನಿ  ಚೀನಾದಲ್ಲಿ ಈಗಾಗಲೇ 12,000 ಕ್ಯಾನ್ ಗಳನ್ನು ಮಾರಿದೆಯಂತೆ. 
ಕ್ಯಾನ್‌ಗಳಲ್ಲಿ ತುಂಬಿರುವ ಕಂಪ್ರೆಸ್ಡ್ ಏಪ್ ಎರಡು ರೀತಿಯಲ್ಲಿದೆ. ಬನ್ಫ್ ಮತ್ತು ಲೇಕ್ ಲೂಯೀಸ್ ಎಂಬ ಸುವಾಸನೆಯಲ್ಲಿ ಈ ಗಾಳಿ ಸಿಗಲಿದೆ. ಮಾಸ್ಕ್ ಧರಿಸಿ ಈ ಗಾಳಿಯನ್ನು  ಸೇವಿಸಬೇಕಾಗುತ್ತದೆ. ಮೂರು ಲೀಟರ್ ಮತ್ತು 8 ಲೀಟರ್ ಕ್ಯಾನ್‌ಗಳಲ್ಲಿಯೂ ಟ್ವಿನ್ ಪ್ಯಾಕ್‌ಗಳ ಮೂಲಕವೂ ಲಭ್ಯವಾಗುವ ಈ ಗಾಳಿಯ ಬೆಲೆ ರು. 1,450 ರಿಂದ ರು. 2,800ರಷ್ಟಿರುತ್ತದೆ.
ಒಂದು ವೇಳೆ ಭಾರತೀಯರು ಉಸಿರಾಡಲು ಗಾಳಿ ಖರೀದಿಸಬೇಕಾಗಿ ಬಂದರೆ ಅದೊಂದು ನಾಚಿಕೆಯ ವಿಷಯವಾಗಲಿದೆ. ಇಷ್ಟೊಂದು ನೈಸರ್ಗಿಕ ಸಂಪತ್ತು ಇದ್ದರೂ, ಮುಂದಾಲೋಚನೆಯಿಲ್ಲದೆ ಎಲ್ಲವನ್ನೂ ನಾಶ ಮಾಡಿ, ಈಗ ಹೊರ ದೇಶದಿಂದ ಉಸಿರಾಡಲು ಗಾಳಿಯನ್ನು ದುಡ್ಡು ಕೊಟ್ಟು ಖರೀದಿಸಬೇಕಾಗಿ ಬರುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಬೇರ್ಯಾವುದಿಲ್ಲ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com