
ವಾಷಿಂಗ್ ಟನ್: ಹಕ್ಕಾನಿ ಉಗ್ರ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ನೀಡಬೇಕಿದ್ದ 450 ಮಿಲಿಯನ್ ಡಾಲರ್ ನಷ್ಟು ನೆರವನ್ನು ತಡೆಹಿಡಿಯಲು ಅಮೆರಿಕ ಕಾಂಗ್ರೆಸ್ ನಿರ್ಧರಿಸಿದೆ.
ಅಮೆರಿಕ ಕಾಂಗ್ರೆಸ್ ಎನ್ ಡಿಎಎ ಕಾಯ್ದೆಯನ್ನು ಅಂಗೀಕರಿಸಿದರೆ, ರಾಷ್ಟ್ರದ ಹಿತದೃಷ್ಟಿಯ ಆಧಾರದಲ್ಲಿ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೆರವು ನೀಡುವುದಕ್ಕೆ ಅಡ್ಡಿ ಉಂಟಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಪಾಕಿಸ್ತಾನ ಅಪ್ಘಾನಿಸ್ತಾನ ಮೂಲದ ಹಕ್ಕಾನಿ ಉಗ್ರ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂಬುದನ್ನು ಅಮೆರಿಕದ ರಕ್ಷಣಾ ಸಚಿವಾಲಯ ದೃಢೀಕರಿಸುವವರೆಗೂ ಅಮೆರಿಕ ಪಾಕಿಸ್ತಾನಕ್ಕೆ 2016 -2017 ನೇ ಸಾಲಿನಲ್ಲಿ ನೀಡಲು ನಿಗದಿಪಡಿಸಿರುವ 450 ಮಿಲಿಯನ್ ಡಾಲರ್ ಮೊತ್ತದ ನೆರವನ್ನು ನೀಡಲು ಸಾಧ್ಯವಾಗುವುದಿಲ್ಲ.
ಅಫ್ಘಾನ್ ಗಡಿ ಹತ್ತಿರದ ಉತ್ತರ ವಝೀರಿಸ್ತಾನ್ ಪ್ರದೇಶವನ್ನು ಪಾಕಿಸ್ತಾನ ಹಕ್ಕಾನಿ ಉಗ್ರರಿಗೆ ಸುರಕ್ಷಿತ ಪ್ರದೇಶವನ್ನಾಗಿಸಿದೆ ಎಂಬ ಅರೋಪವಿದ್ದು, ಪಾಕಿಸ್ತಾನ ಸರ್ಕಾರ ಹಕ್ಕಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದ್ಧತೆ ಪ್ರದರ್ಶಿಸಿದೆ ಎಂಬುದನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ದೃಢೀಕರಿಸಿದ ನಂತರವಷ್ಟೇ ಅಮೆರಿಕ ಪಾಕಿಸ್ತಾನಕ್ಕೆ ನೆರವು ನೀಡಲು ಸಾಧ್ಯವಾಗುತ್ತದೆ.
Advertisement