5ನೇ ಪರಮಾಣು ಪರೀಕ್ಷೆಗೆ ಮುಂದಾದ ಉತ್ತರ ಕೊರಿಯಾ

ಸತತ 4 ಬಾರಿ ಅಣ್ವಸ್ತ್ರ ಪರೀಕ್ಷೆ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಕೋರಿಯಾ ಇದೀಗ ಐದನೇ ಬಾರಿಗೆ ಪರಮಾಣ ಪರೀಕ್ಷೆಗೆ ಮುಂದಾಗಿದೆ ಎಂದು ಅಮೆರಿಕ ಚಿಂತಕರ ಛಾವಡಿಯ ತಜ್ಞರು ತಿಳಿಸಿದ್ದಾರೆ..
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (ಸಂಗ್ರಹ ಚಿತ್ರ)

ಪ್ಯೊಂಗ್ಯಾಂಗ್: ಸತತ 4 ಬಾರಿ ಅಣ್ವಸ್ತ್ರ ಪರೀಕ್ಷೆ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಕೋರಿಯಾ ಇದೀಗ ಐದನೇ ಬಾರಿಗೆ ಪರಮಾಣ ಪರೀಕ್ಷೆಗೆ ಮುಂದಾಗಿದೆ ಎಂದು  ಅಮೆರಿಕ ಚಿಂತಕರ ಛಾವಡಿಯ ತಜ್ಞರು ತಿಳಿಸಿದ್ದಾರೆ.

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ಪರಮಾಣು ದಾಹ ಮಿತಿ ಮೀರಿದ್ದು, ಪರಿಮಿತಿ ದಾಟಿರುವ ಉತ್ತರ ಕೊರಿಯಾ ಮತ್ತೆ ಅಣುಬಾಂಬ್ ಪರೀಕ್ಷೆಗೆ ಮುಂದಾಗಿದೆ. ಇದು ಉತ್ತರ ಕೊರಿಯಾ  ನಡೆಸುತ್ತಿರುವ 5ನೇ ಪರಮಾಣು ಪರೀಕ್ಷೆಯಾಗಿದ್ದು, ಸರ್ವಾಧಿಕಾರಿಯ ಈ ಕೃತ್ಯ ಅಮೆರಿಕ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳ ನಿದ್ದೆಗೆಡಿಸಿದೆ. ಉತ್ತರ ಕೊರಿಯಾ ರಾಜಧಾನಿ  ಪ್ಯೊಂಗ್ಯಾಂಗ್ ನಲ್ಲಿ ತನ್ನ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮುಳಿಗಿರುವ ಕಿಮ್ ಜಾಂಗ್ ಉನ್, ತಾನೊಬ್ಬಸರ್ವಾಧಿಕಾರಿ ಎಂದು ಘೋಷಣೆ ಮಾಡಿಕೊಳ್ಳಲ್ಲಿದ್ದಾನೆ. ಈ ವೇಳೆ ಇಡೀ ವಿಶ್ವಕ್ಕೆ  ಉತ್ತರ ಕೊರಿಯಾ ಅಣ್ವಸ್ತ್ರ ರಾಷ್ಟ್ರವೆಂದು ಬಿಂಬಿಸವ ವಿಶ್ವಸಂಸ್ಥೆ ಸೇರಿದಂತೆ ವಿಶ್ವ ಸಮುದಾಯದ ವಿರೋಧದ ಹೊರತಾಗಿಯೂ 5ನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿದ್ದಾನೆ ಎಂದು  ಹೇಳಲಾಗುತ್ತಿದೆ.



ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಮೆರಿಕ-ಕೊರಿಯಾ ಸಂಸ್ಥೆಯು ಇದನ್ನು ಖಚಿತಪಡಿಸಿದ್ದು, ಸ್ಯಾಟಲೈಟ್ ಚಿತ್ರಗಳ ಮೂಲಕ ಪರಮಾಣು ಪರಿಕ್ಷಾ ಘಟಕದಲ್ಲಿ ವಾಹನಗಳ ಸಂಚಾರವನ್ನು  ಗಮನಿಸಲಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಭವಿಷ್ಯದಲ್ಲಿ ಮತ್ತೊಂದು ಪರಮಾಣು ಪರೀಕ್ಷೆ ನಡೆಸುವ ಉದ್ದೇಶದಿಂದಲೇ ಉತ್ತರ ಕೊರಿಯಾದ ಪರಮಾಣ ಪರೀಕ್ಷಾ ಕೇಂದ್ರದಲ್ಲಿ  ಚಟುವಟಿಕೆಗಳು ಗರಿಗೆದರಿವೆ ಎಂದು ಹೇಳಲಾಗುತ್ತಿದೆ.

ಪ್ಯೊಂಗ್ಯಾಂಗ್​ನಲ್ಲಿ 5ನೇ ಪರಮಾಣು ಪರೀಕ್ಷೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹಿ ಮಾಡಿದ್ದು,  ಜನವರಿ 6ಕ್ಕೆ ಭರ್ಜರಿಯಾದ ಮತ್ತು ಥ್ರಿಲ್ಲಿಂಗ್ ಪರಮಾಣು ಪರೀಕ್ಷೆ  ನಡೆಯಲಿದೆ. ಈ ಮೂಲಕ ಪ್ಯೊಂಗ್ಯಾಂಗ್ ಶಕ್ತಿಶಾಲಿ ಹೈಡ್ರೊಜನ್ ಬಾಂಬ್ ಹೊಂದಲಿದೆ ಎಂದು ಈ ಹಿಂದೆ ಕಿಮ್ ಜಾಂಗ್ ಉನ್ ಚುನಾವಣಾ ಪ್ರಚಾರದ ವೇಳೆ ಘೊಷಿಸಿದ್ದ. ಅದರಂತೆ ಈಗ  ಉತ್ತರ ಕೊರಿಯಾದಲ್ಲಿ ಪರಮಾಣ ಪರೀಕ್ಷೆಯ ಚಟುವಟಿಕಿಗಳು ಗರಿಗೆದರಿದ್ದು, ಯಾವುದೇ ಕ್ಷಣದಲ್ಲಿ ಉತ್ತರ ಕೊರಿಯಾ ಪರಮಾಣ ಪರೀಕ್ಷೆ ನಡೆಸಬಹುದು ಎಂದು ಶಂಕಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com