ಟ್ರಂಪ್ ದಾಖಲೆಗಳ ಪರಿಶೀಲನೆಗೆ ಒಬಾಮಾ ಕರೆ

ಡೊನಾಲ್ಡ್ ಟ್ರಂಪ್ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂಬ ವರದಿಗಳ ನಡುವೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಶಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂಬ ವರದಿಗಳ ನಡುವೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ನ್ಯೂಯಾರ್ಕ್ ಬಿಲಿಯನೇರ್ ಟ್ರಂಪ್ ಅವರ ಹಿಂದಿನ ಹೇಳಿಕೆ ಮತ್ತು ನಿಲುವುಗಳನ್ನು ಹತ್ತಿರದಿಂದ ಪರಿಶೀಲಿಸುವಂತೆ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ.

"ಅವರು ಹಿಂದೆ ನೀಡಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಮುಖ್ಯ" ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುವ ಒಬಾಮಾ "ಎಂತಹ ಗಂಭೀರ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ ಮತ್ತು ಇದು ಗಂಭೀರವಾದ ಕೆಲಸ" ಎಂದಿದ್ದಾರೆ.

ಅಮೆರಿಕಾ ಅಧ್ಯಕ್ಷ ಸ್ಥಾನದ ಸಂಭವನೀಯ ಅಭ್ಯರ್ಥಿ ಎಂದು ನಾಮಕರಣಗೊಂಡಾಗಿಲಿಂದಲೂ ತಮ್ಮ ವಿವಾದಾತ್ಮಕ ಜನಾಂಗೀಯ ನಿಂದನಾ ಹೇಳಿಕೆಗಳಿಂದ ಜಾಗತಿಕವಾಗಿ ಟೀಕೆಗೆ ಗುರಿಯಾಗಿರುವ ಉದ್ದಿಮೆದಾರ ಮತ್ತು ಮಾಜಿ ಟಿ ವಿ ವಾಹಿನಿ ರಿಯಾಲಿಟಿ ಶೋನ ನಿರ್ವಾಹಕ ಈಗ ಅಮೇರಿಕಾ ಅಧ್ಯಕ್ಷೀಯ ಅಭ್ಯರ್ಥಿಯಾಗುವತ್ತ ದಾಪುಗಾಲು ಹಾಕಿರುವುದಕ್ಕೆ ಒಬಾಮಾ ಕಳವಳ ವ್ಯಕ್ತಪಡಿಸಿದ್ದಾರೆ.

"ಇದು ಮನರಂಜನೆಯಲ್ಲ, ರಿಯಾಲಿಟಿ ಕಾರ್ಯಕ್ರಮವಲ್ಲ. ಇದು ಅಮೇರಿಕಾ ಅಧ್ಯಕ್ಷ ಅಭ್ಯರ್ಥಿ ಸ್ಥಾನಕ್ಕೆ ನಡೆಯುತ್ತಿರುವ ಸ್ಪರ್ಧೆ. ಟ್ರಂಪ್ ಅವರ ಸರ್ಕಸ್ ಗೆ ಮರುಳಾಗಬೇಡಿ" ಎಂದು ಒಬಾಮಾ ಶುಕ್ರವಾರ ಹೇಳಿದ್ದಾರೆ.

ಟ್ರಂಪ್ ತಮ್ಮ ದೀರ್ಘ ಕಾಲದ ಸಾರ್ವಜನಿಕ ಜೀವನದಲ್ಲಿ ಏನು ಹೇಳಿದ್ದಾರೆ ಯಾವ ನಿಲುವುಗಳನ್ನು ತೆಗೆದುಕೊಂಡಿದ್ದಾರೆ ಎಂಬೆಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಮತ್ತು ಇದು ಇತರ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ ಒಬಾಮಾ.

"ಯುದ್ಧದ ಬೀತಿಯನ್ನು ಸೃಷ್ಟಿಸುವಂತಹ, ಇತರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಹದಗೆಡಿಸಬಲ್ಲ ಅಥವಾ ಆರ್ಥಿಕ ವ್ಯವಸ್ಥೆ ಕುಸಿಯಬಹುದಾದ ನಿಲುವುಗಳನ್ನು ಅವರು ತೆಗೆದುಕೊಂಡಿದ್ದರೆ ಅವುಗಳನ್ನು ವರದಿ ಮಾಡುವುದು ಅತಿ ಮುಖ್ಯ" ಎಂದು ಒಬಾಮಾ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com