ಪಾಕಿಸ್ತಾನದ ರಶೀದ್ ಮತ್ತು ಶೊಯೇಬ್ ಎಂಬ ಈ ಮಕ್ಕಳನ್ನು ಸೋಲಾರ್ ಕಿಡ್ಸ್ ಎಂದೇ ಕರೆಯಲಾಗುತ್ತಿದೆ. ಸೋಲಾರ್ ಕಿಡ್ಸ್ ಎಂದು ಇವರನ್ನು ಯಾಕೆ ಕರೆಯುತ್ತಾರೆ ಎಂದರೆ ಈ ಮಕ್ಕಳು ಸೂರ್ಯಪ್ರಕಾಶವಿರುವಷ್ಟು ಹೊತ್ತು ಮಾತ್ರ ಸಾಮಾನ್ಯ ಮಕ್ಕಳಂತೆ ಇರಬಲ್ಲರು. ರಾತ್ರಿಯಾಗುತ್ತಿದ್ದಂತೆ ಇವರ ದೇಹ ಮುದುಡಿಹೋಗುತ್ತದೆ. ಈ ಮಕ್ಕಳು ಸೂರ್ಯಪ್ರಕಾಶವಿಲ್ಲದ ವೇಳೆ ಅರ್ಧ ಸತ್ತಂತೆಯೇ ಇರುತ್ತಾರೆ. ಈ ಮಕ್ಕಳ ಚಿಕಿತ್ಸೆಗಾಗಿ ಇವರ ಅಪ್ಪ ಕಳೆದ ಮೂರು ವರುಷಗಳಿಂದ ಕಷ್ಟ ಪಡುತ್ತಲೇ ಇದ್ದರು.