ಲಂಡನ್: ಲ್ಯಾಂಬೆತ್ ಕೌನ್ಸಿಲ್ ನ ಅನುಮತಿಯೊಂದಿಗೆ ಇದೇ ಮೊದಲ ಬಾರಿಗೆ ಬ್ರಿಟಿಷ್ ನಾಡಲ್ಲಿ ಬಸವ ಜಯಂತಿಯನ್ನು ಅಧಿಕೃತವಾಗಿ ಸೋಮವಾರ ಆಚರಿಸಲಾಯಿತು,
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಇಂದು ಲಂಡನ್ ನ ಥೇಮ್ಸ್ ನದಿ ತೀರದಲ್ಲಿದಲ್ಲಿರುವ 12ನೇ ಶತಮಾನದಲ್ಲೇ ವಿಶ್ವಕ್ಕೆ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಪಾಠ ಹೇಳಿದ್ದ ಜಗಜ್ಯೋತಿ ಬಸವೇಶ್ವರ ಅವರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಸವಣ್ಣನವರ 882ನೇ ಜಯಂತಿಗೆ ಚಾಲನೆ ನೀಡಿದರು,
ಲಂಡನ್ ನ ಬಸವೇಶ್ವರ ಪ್ರತಿಷ್ಠಾನ, ಬಸವ ಜಯಂತಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಗುರು ಡಾ.ಎಚ್.ಆರ್. ನಾಗೇಂದ್ರ ಹಾಗೂ ಆಂಜನೇಯ ಅವರನ್ನು ವಿಶೇಷ ಅತಿಥಿಗಾಳಿ ಆಹ್ವಾನಿಸಿತ್ತು.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್ ನಲ್ಲಿ ವಿಶ್ವಗುರು ಬಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು.