ಹಿರೋಶಿಮಾಗೆ ಭೇಟಿ ನೀಡಲಿರುವ ಮೊದಲ ಅಮೆರಿಕಾ ಅಧ್ಯಕ್ಷ ಒಬಾಮಾ

ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕಾದ ಅಣುಬಾಂಬ್ ನಿಂದ ನಾಶವಾಗಿದ್ದ ಜಪಾನಿನ ಹಿರೋಶಿಮಾಗೆ ಭೇಟಿ ನೀಡಲಿರುವ ಮೊದಲ ಕಾರ್ಯನಿರತ ಅಧ್ಯಕ್ಷರಾಗಲಿದ್ದಾರೆ ಬರಾಕ್ ಒಬಾಮಾ ಎಂದು ಅಮೇರಿಕಾ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
Updated on

ವಾಶಿಂಗ್ಟನ್: ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕಾದ ಅಣುಬಾಂಬ್ ನಿಂದ ನಾಶವಾಗಿದ್ದ ಜಪಾನಿನ ಹಿರೋಶಿಮಾಗೆ ಭೇಟಿ ನೀಡಲಿರುವ ಮೊದಲ ಕಾರ್ಯನಿರತ ಅಧ್ಯಕ್ಷರಾಗಲಿದ್ದಾರೆ ಬರಾಕ್ ಒಬಾಮಾ ಎಂದು ಅಮೇರಿಕಾ ಶ್ವೇತ ಭವನ ಘೋಷಿಸಿದೆ.

ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕಾದ ಪರಮಾಣು ಶಸ್ತ್ರಾಸ್ತ್ರಕ್ಕೆ ಬಲಿಯಾಗಿದ್ದ ಸಾವಿರಾರು ಜಪಾನ್ ಜನರು ನೆಲೆಸಿದ್ದ ತಾಣಕ್ಕೆ ಭೇಟಿ ನೀಡುವ ಇರಾದೆಯನ್ನು ಒಬಾಮಾ ತಮ್ಮ ಅಧ್ಯಕ್ಷೀಯ ಅವಧಿಯ ಪ್ರಾರಂಭದಲ್ಲಿ ವ್ಯಕ್ತಪಡಿಸಿದ್ದರು.

ಆಗಸ್ಟ್ ೧೯೪೫ರ ಆ ಘಟನೆಗಾಗಿ ಜಪಾನ್ ದೇಶಕ್ಕೆ ಅಮೇರಿಕಾ ಕ್ಷಮೆ ಕೋರುವ ಅಗದ್ಯವಿಲ್ಲ ಬದಲಾಗಿ ಪರಮಾಣು ಶಸ್ತ್ರಾಸ್ತ್ರಗಳು ತರಬಲ್ಲ ಈ ವಿನಾಶದ ದುರ್ಘಟನೆಯ ನೆನಪಿನಿಂದ ಅಧ್ಯಕ್ಷರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ವೇತ ಭವನ ಅಧಿಕಾರಿಗಳು ಹೇಳಿದ್ದರೆ.

"ಎರಡನೇ ವಿಶ್ವಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಸಿದ್ದಾರ ನಿರ್ಧಾರದ ಬಗ್ಗೆ ಅವರು ಮರು ಚಿಂತನೆ ನಡೆಸುವುದಿಲ್ಲ ಬದಲಾಗಿ ಮುಂದಿನ ಎರಡು ದೇಶಗಳ ಜಂಟಿ ಗುರಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ" ಎಂದು ಒಬಾಮಾ ಅವರ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಬೆನ್ ರೋಡ್ಸ್ ಹೇಳಿದ್ದಾರೆ.

ಮೇ ೨೭ ರಂದು ಹಿರೋಶಿಮಾಗೆ ಭೇಟಿ ನೀಡುವ ವೇಳೆಯಲ್ಲಿ ಒಬಾಮಾ ಅವರ ವಿದೇಶಿ ನೀತಿಯ ಭಾಗವಾಗಿ ಅಣು ನಿಶಸ್ತ್ರೀಕರಣದ ಬಗ್ಗೆ ಮಾತನಾಡಲಿದ್ದಾರೆ ಎಂದು ರೋಡ್ಸ್ ತಿಳಿಸಿದ್ದಾರೆ.

ಬಾಂಬ್ ಬಿದ್ದ ಜಾಗದಲ್ಲಿ ಸ್ಥಾಪಿಸಲಾಗಿರುವ ಶಾಂತಿ ಸ್ಮಾರಕ ಉದ್ಯಾನವನಕ್ಕೂ ಒಬಾಮ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com