ಪಾಕಿಸ್ತಾನ- ಅಮೆರಿಕ ದ್ವಿಪಕ್ಷೀಯ ಸಂಬಂಧ 3 ತಿಂಗಳಿನಿಂದ ಹದಗೆಡುತ್ತಿದೆ : ಪಾಕ್ ವಿದೇಶಾಂಗ ಸಲಹೆಗಾರ

ಪಾಕಿಸ್ತಾನ- ಅಮೆರಿಕ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ಸರ್ತಾಜ್ ಅಜೀಜ್, ಉಭಯ ದೇಶಗಳ ಸಂಬಂಧ ಕಳೆದ 3 ತಿಂಗಳಿನಿಂದ ಒತ್ತಡದಲ್ಲಿದೆ ಎಂದು ಹೇಳಿದ್ದಾರೆ.
ಸರ್ತಾಜ್ ಅಜೀಜ್
ಸರ್ತಾಜ್ ಅಜೀಜ್

ಇಸ್ಲಾಮಾಬಾದ್: ಪಾಕಿಸ್ತಾನ- ಅಮೆರಿಕ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ಪಾಕ್ ಪ್ರಧಾನ ಮಂತ್ರಿಯ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್, ಉಭಯ ದೇಶಗಳ ಸಂಬಂಧ ಕಳೆದ 3 ತಿಂಗಳಿನಿಂದ ಒತ್ತಡದಲ್ಲಿದೆ ಎಂದು ಹೇಳಿದ್ದಾರೆ.
ಎಫ್-16 ಯುದ್ಧ ವಿಮಾನ ಪೂರೈಕೆ ವಿಷಯದಲ್ಲಿ  ಅಮೆರಿಕ ಪಾಕಿಸ್ತಾನಕ್ಕೆ ಷರತ್ತುಗಳನ್ನು ವಿಧಿಸಿರುವುದರ ಪರಿಣಾಮ ಪಾಕ್- ಅಮೆರಿಕ ಸಂಬಂಧ ಹದಗೆಡುತ್ತಿದೆ ಎಂದು ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿರುವುದನ್ನು ಡಾನ್ ಪತ್ರಿಕೆ ವರದಿ ಮಾಡಿದೆ. ವಿಕೀಲಿಕ್ಸ್, ಅಬ್ಬೋಟಾಬಾದ್ ಕಾರ್ಯಾಚರಣೆಗಳ ಪರಿಣಾಮ 2011 ರಲ್ಲಿಯೂ ಪಾಕ್- ಅಮೆರಿಕಾದ ದ್ವಿಪಕ್ಷೀಯ ಸಂಬಂಧ ಸರಿ ಇರಲಿಲ್ಲ. ಮತ್ತೆ 2013 ರಲ್ಲಿ ಉಭಯ ದೇಶಗಳ ಸಂಬಂಧ ಉತ್ತಮವಾಗಿತ್ತು. ಆದರೆ ಪಾಕಿಸ್ತಾನಕ್ಕೆ ಸಬ್ಸಿಡಿ ದರದಲ್ಲಿ ಎಫ್-16 ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವ ವಿಷಯದಲ್ಲಿ ಅಮೆರಿಕ ಕೈಗೊಂಡ ನಿರ್ಧಾರದಿಂದ ಮತ್ತೆ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿದೆ ಎಂದು ಸರ್ತಾಜ್ ಅಜೀಜ್ ಅಭಿಪ್ರಾಯಪಟ್ಟಿದ್ದು, ಅಮೆರಿಕ ಭಾರತದೊಂದಿಗಿನ ಸಂಬಂಧವನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com