ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಭಾರತ, ಯುಎಸ್ ರಷ್ಯಾ ಚಾಲನಾ ಶಕ್ತಿ: ಪೆಂಟಗನ್

ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಅಮೆರಿಕ ಕಾಂಗ್ರೆಸ್ ಗೆ ವರದಿ ನೀಡಿರುವ ಪೆಂಟಗನ್, ಅಮೆರಿಕ, ರಷ್ಯಾ, ಭಾರತ ಇದಕ್ಕೆ ಕಾರಣ ಎಂದಿದೆ.
ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಭಾರತ, ಯುಎಸ್ ರಷ್ಯಾ ಚಾಲನಾ ಶಕ್ತಿ!
ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಭಾರತ, ಯುಎಸ್ ರಷ್ಯಾ ಚಾಲನಾ ಶಕ್ತಿ!
Updated on

ವಾಷಿಂಗ್ ಟನ್: ಒಂದೆಡೆ ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ(ಎನ್ಎಸ್ ಜಿ) ಸಮೂಹಕ್ಕೆ ಭಾರತದ ಸೇರ್ಪಡೆಗೆ ಚೀನಾದ ಅಡ್ಡಿ ಕುರಿತು ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ ಚೀನಾದ ಅಣ್ವಸ್ತ್ರ ಆಧುನಿಕರಣಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಅಮೆರಿಕ ಕಾಂಗ್ರೆಸ್ ಗೆ ವರದಿ ನೀಡಿರುವ ಪೆಂಟಗನ್, ಅಮೆರಿಕ, ರಷ್ಯಾ, ಭಾರತ ಇದಕ್ಕೆ ಕಾರಣ ಎಂದು ಹೇಳಿದ್ದು ರಕ್ಷಣಾ ವಲಯದಲ್ಲಿ ಹೊಸ ನಿಯಂತ್ರಣ ಮತ್ತು ಸಂವಹನ ಸಾಮರ್ಥ್ಯಗಳನ್ನು ಅವಳಡಿಸಿಕೊಳ್ಳುತ್ತಿದೆ ಎಂದು ಎಚ್ಚರಿಸಿದೆ.

ಅಮೆರಿಕದ ಶಸ್ತ್ರಾಸ್ತ್ರಗಳ ಆಧುನೀಕರಣ, ರಷ್ಯಾ ಕಾರ್ಯತಂತ್ರದ ಭಾಗವಾಗಿರುವ ಐಎಸ್ಆರ್ ಹಾಗೂ ರಕ್ಷಣಾ ಕ್ಷಿಪಣಿಗಳ ಸಾಮರ್ಥ್ಯಕ್ಕೆ ನಿರೋಧಕವಾಗಿ ಆಧುನಿಕ ತಲೆಮಾರಿನ ಎಂಐ ಆರ್ ವಿ ಸಿಡಿತಲೆಗಳನ್ನು ಹೊಂದಿರುವ  ಮೊಬೈಲ್ ಕ್ಷಿಪಣಿಗಳು ಅಗತ್ಯವಾಗಿದೆ ಎಂದು ಚೀನಾ ಒತ್ತಿ ಹೇಳುತ್ತಿದೆ. ಇನ್ನು ಭಾರತದ ಅಣ್ವಸ್ತ್ರ ಶಕ್ತಿ ಸಹ ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಕಾರಣವಾಗಿರುವ ಒಂದು ಅಂಶವಾಗಿದೆ ಎಂದು ಪೆಂಟಗನ್ ತನ್ನ ವರದಿಯಲ್ಲಿ ತಿಳಿಸಿದೆ.

ಪೆಂಟಗನ್ ನೀಡಿರುವ ವರದಿಯ ಪ್ರಕಾರ ಅಮೆರಿಕ ಹಾಗೂ ಇನ್ನಿತರ ರಾಷ್ಟ್ರಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಎದುರಿಸಲು ಚೀನಾ ತಂತ್ರಜ್ಞಾನದ ಒಂದು ವ್ಯಾಪ್ತಿಯಲ್ಲಿ ಸಂಶೋಧನೆ ಮಾಡುತ್ತಿದೆ. 2014 ರಲ್ಲಿ ಚೀನಾ ಹೈಪರ್ ಸೋನಿಕ್ ಗ್ಲೈಡ್ ವಾಹನವನ್ನು ಪರೀಕ್ಷೆಗೊಳಪಡಿಸಿದ್ದನ್ನು ಒಪ್ಪಿಕೊಂಡಿತ್ತು. ಹೊಸ ತಂತ್ರಜ್ಞಾನದ ಕ್ಷಿಪಣಿಗಳು ಚೀನಾದ ಅಣ್ವಸ್ತ್ರ ಶಕ್ತಿಯನ್ನು ಹೆಚ್ಚಿಸುತ್ತಿವೆ ಎಂದು ಪೆಂಟಗನ್ ಆತಂಕ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com