ಯೆಮೆನ್ ಆತ್ಮಾಹುತಿ ಬಾಂಬ್ ದಾಳಿಗೆ 25 ಪೊಲೀಸರ ಸಾವು

ಯೆಮೆನ್ ಪೊಲೀಸ್ ನೇಮಕಾತಿ ವಿರೋಧಿಸಿ ಉಗ್ರಗಾಮಿ ಸಂಘಟನೆ ನಡೆಸಿದ ಆತ್ಮಹತ್ಯಾ ದಾಳಿಯಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ...
ಅಲ್ ಖೈದಾ ವಶದಲ್ಲಿದ್ದ ಮಕುಲ್ಲಾ ನಗರ (ಎಎಫ್ ಪಿ ಚಿತ್ರ)
ಅಲ್ ಖೈದಾ ವಶದಲ್ಲಿದ್ದ ಮಕುಲ್ಲಾ ನಗರ (ಎಎಫ್ ಪಿ ಚಿತ್ರ)

ಯೆಮೆನ್: ಯೆಮೆನ್ ಪೊಲೀಸ್ ನೇಮಕಾತಿ ವಿರೋಧಿಸಿ ಉಗ್ರಗಾಮಿ ಸಂಘಟನೆ ನಡೆಸಿದ ಆತ್ಮಹತ್ಯಾ ದಾಳಿಯಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಯೆಮೆನ್ ವ ಮುಕಲ್ಲಾದಲ್ಲಿ ಈ ದಾಳಿ ನಡೆದಿದ್ದು, ಸೇನಾ ನೆಲೆಯನ್ನೇ ನೇರವಾಗಿ ಗುರಿಯಾಗಿಸಿಕೊಂಡ ಉಗ್ರರು ಈ ಭೀಕರ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 25 ಪೊಲೀಸ್  ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ ಬಾಂಬ್ ಸ್ಫೋಟದಿಂದಾಗಿ 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಸ್ತುತ ಈ ಭೀಕರ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ನೂತನ ಯೆಮೆನ್ ಅಧ್ಯಕ್ಷ ಅಬ್ದ್ ರಬ್ಬು ಮಸ್ಸೂರ್ ಹಾದಿ ಅವರನ್ನು ಬೆಂಬಲಿಸಿದ ಸೇನೆ  ವಿರುದ್ಧ ನಡೆಸಿದ ದಾಳಿ ಇದಾಗಿದೆ ಎಂದು ಅದು ಹೇಳಿಕೊಂಡಿದೆ. ಇತ್ತೀಚೆಗಷ್ಟೇ ಯೆಮೆನ್​ಗೆ ವಾಪಾಸಾಗಿರುವ ಸೌದಿ ಸೇನೆ ಏಪ್ರಿಲ್ 24ರಂದು ಅಲ್​ಖೈದಾ ವಶದಿಂದ ಮುಕಲ್ಲಾವನ್ನು  ವಶಪಡಿಸಿಕೊಂಡು, ತನ್ನ ಬೆಂಬಲಿತ ಅಬ್ದ್ ರಬ್ಬು ಮಸ್ಸೂರ್ ಹಾದಿ ಅವರನ್ನು ಮತ್ತೆ ಯೆಮೆನ್ ಅಧ್ಯಕ್ಷರನ್ನಾಗಿಸಿತ್ತು.

ಅಲ್ಲದೆ ಯೆಮೆನ್ ಸೇನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಸಂಬಂಧ ಸ್ಥಳೀಯ ಉಗ್ರ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಇಂದು ನೇಮಕಾತಿ ಪ್ರಕ್ರಿಯೆ  ನಡೆಯುತ್ತಿದ್ದ ಸಂದರ್ಭದಲ್ಲಿಯೇ ಬಾಂಬ್ ಸ್ಫೋಟಗೊಂಡಿದೆ. ಈಗ್ಗೆ ಕೆಲವೇ ದಿನಗಳ ಹಿಂದಷ್ಟೇ ಸೇನಾ ನೆಲೆ ಸಮೀಪ ಮೂರು ಬಾಂಬ್ ದಾಳಿ ಸಂಭವಿಸಿತ್ತು. ದಾಳಿಯಲ್ಲಿ ಕನಿಷ್ಠ 15 ಸೇನಾ  ಸಿಬ್ಬಂದಿ ಸಾವಿಗೀಡಾಗಿದ್ದರು. ಮೂರು ದಾಳಿಗಳ ಪೈಕಿ ಒಂದು ದಾಳಿಯ ಹೊಣೆಯನ್ನು ಡಾಯಿಸ್ ತಾಕ್​ಫಿರಿ ಹೊತ್ತುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com