27 ಶಂಕಿತ ಇಸಿಸ್ ಉಗ್ರರ ಹತ್ಯೆಗೈದ ಟರ್ಕಿ ಯೋಧರು

ಸಿರಿಯಾದ ಉತ್ತರ ಅಲೆಪ್ಪೋ ನಗರದ ಮೇಲೆ ಟರ್ಕಿ ಸೇನೆ ನಡೆಸಿದ ವಾಯುದಾಳಿ ಪರಿಣಾಮ ಕನಿಷ್ಠ 27 ಮಂದಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ...
ಇಸಿಸ್ ವಿರುದ್ಧ ವಾಯುದಾಳಿ (ಸಂಗ್ರಹ ಚಿತ್ರ)
ಇಸಿಸ್ ವಿರುದ್ಧ ವಾಯುದಾಳಿ (ಸಂಗ್ರಹ ಚಿತ್ರ)

ಅಂಕಾರ: ಸಿರಿಯಾದ ಉತ್ತರ ಅಲೆಪ್ಪೋ ನಗರದ ಮೇಲೆ ಟರ್ಕಿ ಸೇನೆ ನಡೆಸಿದ ವಾಯುದಾಳಿ ಪರಿಣಾಮ ಕನಿಷ್ಠ 27 ಮಂದಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಉಗ್ರರು  ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾ ರಾತ್ರಿ ಉತ್ತರ ಅಲೆಪ್ಪೋ ನಗರದ ಮೇಲೆ ದಾಳಿ ಮಾಡಿದ ಟರ್ಕಿ ಸೇನೆ ಸತತ 2 ಗಂಟೆಗಳ ಕಾಲ ಇಸಿಸ್ ಉಗ್ರರ ಅಡಗುದಾಣಗಳ ಮೇಲೆ ಶೆಲ್ ದಾಳಿ ನಡೆಸಿದೆ. ಗಡಿಯಲ್ಲಿ ಇಸಿಸ್  ಉಗ್ರರ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಟರ್ಕಿ ಸೇನೆ ಈ ದಾಳಿ ಆರಂಭಿಸಿದ್ದು, ಗಡಿಯಲ್ಲಿ ರಾಕೆಟ್ ಲಾಂಚರ್ ಗಳ ಮೂಲಕ ಮತ್ತು ಯುದ್ಧ ವಿಮಾನಗಳ ಮೂಲಕ ದಾಳಿ ನಡೆಸಿದೆ.

ಟರ್ಕಿ ಸೇನೆಯೊಂದಿಗೆ ಅಮೆರಿಕದ ಮೈತ್ರಿಕೂಟ ಪಡೆಯೂ ಈ ಹಿಂದೆ ಇದೇ ಪ್ರದೇಶದಲ್ಲಿ ವಾಯು ದಾಳಿ ನಡೆಸಿತ್ತು. ಇದೀಗ ಟರ್ಕಿ ಸೇನೆ ದಾಳಿ ಮಾಡಿ 27 ಶಂಕಿತ ಇಸಿಸ್ ಉಗ್ರರನ್ನು  ಹತ್ಯೆಗೈದಿದೆ. ದಾಳಿ ವೇಳೆ ಇಸಿಸ್ ಉಗ್ರ ಸಂಘಟನೆಗೆ ಸೇರಿದ ಐದು ಅಡಗುದಾಣ ಮತ್ತು 2 ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ನಾಶಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com