ಪ್ಯಾರಿಸ್ ದಾಳಿಯ ಏಕೈಕ ಜೀವಂತ ಉಗ್ರನ ವಿಚಾರಣೆ

ಸುಮಾರು 130 ಜನರ ಧಾರುಣ ಸಾವಿಗೆ ಕಾರಣವಾಗಿದ್ದ ಪ್ಯಾರಿಸ್ ನಗರದ ಮೇಲಿನ ಉಗ್ರದಾಳಿಯಲ್ಲಿ ಬಂಧಿತನಾಗಿರುವ ಏಕೈಕ ಉಗ್ರ ನ ವಿಚಾರಣೆಯನ್ನು ತೀವ್ರ ಭದ್ರತೆಯೊಂದಿಗೆ ಪ್ಯಾರಿಸ್ ನಲ್ಲಿ ನಡೆಸಲಾಗುತ್ತಿದೆ.
ಪ್ಯಾರಿಸ್ ದಾಳಿ ಮತ್ತು ಉಗ್ರ ಸಲಾಹ್ ಅಬ್ಡೆಸ್ಲಾಮ್ (ಸಂಗ್ರಹ ಚಿತ್ರ)
ಪ್ಯಾರಿಸ್ ದಾಳಿ ಮತ್ತು ಉಗ್ರ ಸಲಾಹ್ ಅಬ್ಡೆಸ್ಲಾಮ್ (ಸಂಗ್ರಹ ಚಿತ್ರ)

ಪ್ಯಾರಿಸ್: ಸುಮಾರು 130 ಜನರ ಧಾರುಣ ಸಾವಿಗೆ ಕಾರಣವಾಗಿದ್ದ ಪ್ಯಾರಿಸ್ ನಗರದ ಮೇಲಿನ ಉಗ್ರದಾಳಿಯಲ್ಲಿ ಬಂಧಿತನಾಗಿರುವ ಏಕೈಕ ಉಗ್ರ ನ ವಿಚಾರಣೆಯನ್ನು ತೀವ್ರ ಭದ್ರತೆಯೊಂದಿಗೆ  ಪ್ಯಾರಿಸ್ ನಲ್ಲಿ ನಡೆಸಲಾಗುತ್ತಿದೆ.

ದಾಳಿ ಮಾಡಿದವರ ಪೈಕಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಸಲಾಹ್ ಅಬ್ಡೆಸ್ಲಾಮ್ ನನ್ನು ರಾಜಧಾನಿ ಪ್ಯಾರಿಸ್​ನಲ್ಲಿ ಭಯೋತ್ಪಾದನೆ ವಿಚಾರಣೆ ನಡೆಸುತ್ತಿದ್ದಾರೆ. ಉಗ್ರನನ್ನು ವಿಚಾರಣೆ  ನಡೆಸುವ ಸಂಬಂಧ ಈಗಾಗಲೇ ಕೋರ್ಟ್ ಆವರಣದಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ವ್ಯಾಪಕ ಭದ್ರತೆ ನಡುವೆ ಉಗ್ರನ ವಿಚಾರಣೆ ನಡೆಸಲಾಗುತ್ತಿದೆ.

ಪ್ಯಾರಿಸ್ ದಾಳಿ ನಡೆದು ತಿಂಗಳುಗಳೇ ಕಳೆದರೂ ಈ ವರೆಗೂ ಉಗ್ರ ಸಲಾಹ್ ಅಬ್ಡೆಸ್ಲಾಮ್ ನ ವಿಚಾರಣೆ ನಡೆದಿರಲಿಲ್ಲ. ಸಾಕಷ್ಟು ಬಾರಿ ವಿಚಾರಣೆಗೆ ಅಧಿಕಾರಿಗಳು ಮುಂದಾಗಿದ್ದರಾದರೂ,  ಭದ್ರತಾ ಕಾರಣಗಳಿಂದಾಗಿ ಅದು ಮುಂದಕ್ಕೆ ಹೋಗಿತ್ತು. ಇದೀಗ ಉಗ್ರ ಸಲಾಹ್ ಅಬ್ಡೆಸ್ಲಾಮ್ ನನ್ನು ತೀವ್ರ ಭದ್ರತೆ ನಡುವೆ ವಿಚಾರಣೆ ಮಾಡಲಾಗುತ್ತಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ  ನಡೆದಿದ್ದ ಪ್ಯಾರಿಸ್ ದಾಳಿಯಲ್ಲಿ ಕನಿಷ್ಠ 130 ಮಂದಿ ಅಸುನೀಗಿದ್ದರು. ಈ ದಾಳಿ ನಡೆದು ಸುಮಾರು 3 ತಿಂಗಳ ಬಳಿಕೆ ಅಂದರೆ ಮಾರ್ಚ್ ತಿಂಗಳಲ್ಲಿ ಉಗ್ರ  ಸಲಾಹ್ ಅಬ್ಡೆಸ್ಲಾಮ್ ಬಂಧನವಾಗಿತ್ತು.  ಅಲ್ಲಿಯವರೆಗೂ ಈತನಿಗಾಗಿ ಪ್ಯಾರಿಸ್ ಪೊಲೀಸರು ಯುರೋಪಿನಾದ್ಯಂತ ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ಪ್ಯಾರಿಸ್ ಪೊಲೀಸರು ಮಾರ್ಚ್ ತಿಂಗಳಲ್ಲಿ ಬೆಲ್ಜಿಯಂನ ರಹಸ್ಯ  ಸ್ಥಳವೊಂದರಲ್ಲಿ ಅವಿತಿದ್ದ ಉಗ್ರ ಸಲಾಹ್ ಅಬ್ಡೆಸ್ಲಾಮ್ ನನ್ನು ಬಂಧಿಸಿದ್ದರು. ಇದೀಗ ಆತನನ್ನು ನ್ಯಾಯಾಧೀಶರ ಮುಂದೆ ವಿಚಾರಣೆಗಾಗಿ ಕರೆತರಲಾಗಿದೆ.

2015ರ ನವೆಂಬರ್ 30ರಂದು ಪ್ಯಾರಿಸ್​ನಲ್ಲಿ ಸರಣಿ ಉಗ್ರ ದಾಳಿಗಳು ನಡೆದಿದ್ದವು. ಅಲ್ಲಿನ ಖಾಸಗಿ ಹೊಟೆಲ್ ವೊಂದರಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಮದ ಮೇಲೆ ದಾಳಿ ಮಾಡಿದ್ದ  ಉಗ್ರರು ಮನಸೋ ಇಚ್ಛೆ ಗುಂಡಿನ ಸುರಿಮಳೆ ಗರೆದು ಹತ್ತಾರು ಮಂದಿ ಸಾವಿಗೆ ಕಾರಣರಾಗಿದ್ದರು. ಈ ದಾಳಿಗಳ ಬಳಿಕ ಪ್ರಾನ್ಸ್ ದೇಶದಲ್ಲಿ ಅನಿವಾರ್ಯವಾಗಿ ಆಂತರಿಕ ತುರ್ತು ಪರಿಸ್ಥಿತಿ  ಹೇರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com