ಅಮೆರಿಕಾ ಜೊತೆಗಿನ ಸಂಬಂಧಕ್ಕೆ ಡ್ರೋನ್ ದಾಳಿ ಮಾರಕ: ಪಾಕಿಸ್ತಾನ ಸೇನಾಧ್ಯಕ್ಷ

ಆಪ್ಘಾನಿಸ್ತಾನದ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಅವನ್ನು ಹತ್ಯೆ ಮಾಡಲು ಅಮೇರಿಕಾ ಮಾಡಿದ ಡ್ರೋನ್ ದಾಳಿ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳಿಗೆ ಮಾರಕ ಎಂದು ಪಾಕಿಸ್ತಾನದ
ಪಾಕಿಸ್ತಾನದ ಸೇನಾಧ್ಯಕ್ಷ ರಶೀಲ್ ಶರೀಫ್
ಪಾಕಿಸ್ತಾನದ ಸೇನಾಧ್ಯಕ್ಷ ರಶೀಲ್ ಶರೀಫ್

ಇಸ್ಲಮಾಬಾದ್: ಆಪ್ಘಾನಿಸ್ತಾನದ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಅವನ್ನು ಹತ್ಯೆ ಮಾಡಲು ಅಮೇರಿಕಾ ಮಾಡಿದ ಡ್ರೋನ್ ದಾಳಿ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳಿಗೆ ಮಾರಕ ಎಂದು ಪಾಕಿಸ್ತಾನದ ಸೇನಾಧ್ಯಕ್ಷ ರಶೀಲ್ ಶರೀಫ್ ಬುಧವಾರ ಹೇಳಿದ್ದಾರೆ.

ಸೇನಾದ್ಯಕ್ಷರ ಮುಖ್ಯ ಕಚೇರಿಗೆ ಭೇಟಿ ನೀಡಿದ್ದ ಅಮೆರಿಕಾದ ರಾಯಭಾರಿ ಡೇವಿಡ್ ಹೇಲ್ ಅವರಿಗೆ ಶರೀಫ್ ಈ ರೀತಿ ಹೇಳಿದ್ದು, ಮೇ ೨೨ ರಂದು ಬಲೋಚಿಸ್ಥಾನದಲ್ಲಿ ಅಮೇರಿಕಾ ನಡೆಸಿದ ದಾಳಿಯ ನಂತರದ ಪರಿಸ್ಥಿತಿ ಕೂಡ ಚರ್ಚೆಗೆ ಬಂದಿತ್ತು ಎಂದು ಕೂಡ ಸೇನೆ ತಿಳಿಸಿದೆ.

"ಡ್ರೋನ್ ದಾಳಿಯ ಬಗೆಗೆ ಗಂಭೀರವಾದ ಕಳವಳ ವ್ಯಕ್ತಪಡಿಸಲಾಯಿತು ಹಾಗು ಇಂತಹ ನಡೆಗಳು ರಾಷ್ಟ್ರದ ಸಾರ್ವಭೌಮತ್ವಕ್ಕೆ ನೀಡದ ಗೌರವ ಮತ್ತು ಎರಡೂ ದೇಶಗಳ ನಡುವಿನ ಸಂಬಂಧಗಳಿಗೆ ಹಾನಿಕರ ಎಂದು ಸೇನಾಧ್ಯಕ್ಷ ಹೇಳಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಶಾಂತಿಗಾಗಿ ನಡೆಯುತ್ತಿರುವ ಪ್ರತಿಕ್ರಿಯೆಗೂ ಇದು ಧಕ್ಕೆ ತರುತ್ತದೆ ಎಂದು ಅವರು ತಿಳಿಸಿದರು" ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.

ಇದೇ ಮೊದಲ ಬಾರಿಗೆ ಪಾಕಿಸ್ತಾನ ಸೇನೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದೆ.

ತಾಲಿಬಾನ್ ಮುಖಂಡ ಮುಲ್ಲಾ ಅಕ್ತರ್ ಮನ್ಸೂರ್ ಸಾವನ್ನು ಖಚಿತಪಡಿಸಲು ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಚೌಧರಿ ನಿಸಾರ್ ಅಲಿ ಖಾನ್ ನೆನ್ನೆ ನಿರಾಕರಿಸಿದ್ದರು ಆದರೆ ಡಿ ಎನ್ ಎ ಪರೀಕ್ಷೆಯಿಂದ ಅಮೇರಿಕಾ ಡ್ರೋನ್ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗುವುದು ಎಂದು ಅವರು ತಿಳಿಸಿದ್ದರು.

ಚೌಧರಿ ಕೂಡ ಪಾಕಿಸ್ತಾನ ನೆಲದ ಮೇಲೆ ನಡೆದ ಈ ದಾಳಿ ಎರಡು ದೇಶಗಳ ಸಂಬಧಗಳ ನಡುವೆ ಬಿರುಕುಂಟು ಮಾಡಬಲ್ಲದು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com