ಅಮೆರಿಕನ್ನರು ಸುದ್ದಿಗೆ ಫೇಸ್ ಬುಕ್ ಮೊರೆ ಹೋಗುವುದು ಹೆಚ್ಚು: ಸಮೀಕ್ಷೆ

ಸುಮಾರು ಶೇಕಡಾ 62ರಷ್ಟು ಮಂದಿ ಅಮೆರಿಕನ್ನರು ಸಾಮಾಜಿಕ ತಾಣಗಳಾದ ರೆಡ್ಡಿಟ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಸುದ್ದಿಗಳನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಸುಮಾರು ಶೇಕಡಾ 62ರಷ್ಟು ಮಂದಿ ಅಮೆರಿಕನ್ನರು ಸಾಮಾಜಿಕ ತಾಣಗಳಾದ ರೆಡ್ಡಿಟ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಸುದ್ದಿಗಳನ್ನು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಫೇಸ್ ಬುಕ್ ಮುಂಚೂಣಿಯಲ್ಲಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಫೇಸ್ ಬುಕ್ ಬಹುದೊಡ್ಡ ಸಾಮಾಜಿಕ ಜಾಲತಾಣವಾಗಿದ್ದು, ಅಮೆರಿಕದಲ್ಲಿ ಶೇಕಡಾ 67ರಷ್ಟು ವಯಸ್ಕರನ್ನು ತಲುಪಿದೆ. ಫೇಸ್ ಬುಕ್ ಬಳಕೆದಾರರ ಮೂರನೇ ಎರಡು ಭಾಗದಷ್ಟು ಜನರು ಅದರ ಮೂಲಕವೇ ಸುದ್ದಿಗಳನ್ನು ಪಡೆದುಕೊಳ್ಳುತ್ತಿದ್ದು,  ಒಟ್ಟಾರೆ ಜನಸಂಖ್ಯೆಯ ಶೇಕಡಾ 44ರಷ್ಟು ಜನತೆಗೆ ತಲುಪುತ್ತಿದೆ ಎಂದು ಪ್ಯೂ ಸಂಶೋಧನಾ ಸಂಸ್ಥೆ, ಜಾನ್ ಎಸ್ ಮತ್ತು ಜೇಮ್ಸ್ ಎಲ್. ನೈಟ್ ಫೌಂಡೇಶನ್ ಜೊತೆ ಸೇರಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ನಂತರದ ಸ್ಥಾನದಲ್ಲಿ ಯೂ ಟ್ಯೂಬ್ ಇದೆ.

ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಬಳಕೆದಾರರು ಆನ್ ಲೈನ್ ನಲ್ಲಿ ಬೇರೆ ಏನೋ ಕೆಲಸ ಮಾಡುತ್ತಿರುವಾಗ ಸುದ್ದಿ ಬರುತ್ತದೆ. ಇನ್ನೊಂದೆಡೆ ಟ್ವಿಟ್ಟರ್, ರೆಡ್ಡಿಟ್, ಲಿಂಕೆಡ್ ಇನ್ ನಲ್ಲಿ ಬಳಕೆದಾರರು ಸುದ್ದಿಯನ್ನೇ ಆನ್ ಲೈನ್ ಮೂಲಕ ಹುಡುಕುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com