ಗೊರಿಲ್ಲಾ ಪಾರ್ಕ್‌ಗೆ ಬಿದ್ದ 4 ವರ್ಷದ ಮಗು ರಕ್ಷಿಸಲು ಗೊರಿಲ್ಲಾ ಕೊಂದ ಸಿಬ್ಬಂದಿ

ಅಮೆರಿಕದ ಸಿನ್ ಸಿನ್ನಾಟಿ ಮೃಗಾಲಯದಲ್ಲಿ ಗೊರಿಲ್ಲಾ ವಿದ್ದ ಪಾರ್ಕ್ ನಲ್ಲಿ 4 ವರ್ಷದ ಮಗುವೊಂದು ಆಯತಪ್ಪಿ 12 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು, ಮಗುವನ್ನು ರಕ್ಷಿಸುವ...
ಗೊರಿಲ್ಲಾ
ಗೊರಿಲ್ಲಾ

ವಾಷಿಂಗ್ಟನ್: ಅಮೆರಿಕದ ಸಿನ್ ಸಿನ್ನಾಟಿ ಮೃಗಾಲಯದಲ್ಲಿ ಗೊರಿಲ್ಲಾ ವಿದ್ದ ಪಾರ್ಕ್ ನಲ್ಲಿ 4 ವರ್ಷದ ಮಗುವೊಂದು ಆಯತಪ್ಪಿ 12 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು, ಮಗುವನ್ನು ರಕ್ಷಿಸುವ ಸಲುವಾಗಿ ಮೃಗಾಲಯ ಸಿಬ್ಬಂದಿ ಗೊರಿಲ್ಲಾಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಗೊರಿಲ್ಲಾವಿದ್ದ ಅಂಗಳದ ನೀರಿನ ಕೊಳದಲ್ಲಿ ಮಗು ಬಿದ್ದಿದ್ದರಿಂದ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಮಗು ಬಿಳುತ್ತಿದ್ದಂತೆ ಅಲ್ಲೇ ಇದ್ದ 17 ವರ್ಷದ ಗೊರಿಲ್ಲಾ ಮಗುವಿನ ಹತ್ತಿರ ಬಂದು ಮಗುವನ್ನು ಕೈಗಳಿಂದ ಹಿಡಿದುಕೊಂಡಿದೆ. ಸುಮಾರು 10 ನಿಮಿಷಗಳ ಕಾಲ ಗೊರಿಲ್ಲಾ ಮಗುವನ್ನು ಹಿಡಿದುಕೊಂಡಿತ್ತು.

ಇದನ್ನು ಕಂಡ ಪ್ರವಾಸಿಗರು ಸಹಾಯಕ್ಕಾಗಿ ಕೂಗಿಕೊಂಡಾಗ ಅಲ್ಲಿಗೆ ಬಂದ ಸಿಬ್ಬಂದಿ ಗೊರಿಲ್ಲಾಗೆ ಗುಂಡಿಟ್ಟು ಕೊಂದು ಮಗುವನ್ನು ರಕ್ಷಿಸಿದ್ದಾರೆ. ಇನ್ನು ದೊಡ್ಡ ಬೇಲಿ ದಾಟಿ ಮಗು ಬಿದ್ದ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com