ಇಸ್ಲಮಾಬಾದ್: ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ಉಗ್ರಗಾಮಿ ವಿರೋಧಿ ದಳ ಒಂಭತ್ತು ಶಂಕಿತ ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಾಂತ್ಯದ ಶಿಖುಪುರದಲ್ಲಿ 'ಆಲ್ ಖೈದಾ' ಉಗ್ರಗಾಮಿಗಳು ಅಡಗಿದ್ದಾರೆ ಮತ್ತು ಅವರು ಲಾಹೋರ್ ಸುತ್ತಮುತ್ತ ಪೋಲೀಸರ ಮೇಲೆ ದಾಳಿ ನಡೆಸಲಿದ್ದಾರೆ ಎಂಬ ನಿಖರ ಮಾಹಿತಿ ಉಗ್ರಗಾಮಿ ವಿರೋಧಿ ದಳಕ್ಕೆ (ಸಿ ಟಿ ಡಿ) ಸಿಕ್ಕಿದ ಹಿನ್ನಲೆಯಲ್ಲಿ ಈ ಪ್ರತಿ ದಾಳಿ ನಡೆಸಿದ್ದೇವೆ ಎಂದು ಹೇಳಿಕೆ ತಿಳಿಸಿದೆ.
ಶಂಕಿತರನ್ನು ಬಂಧಿಸಲು ಖೇರೋಕಿ ಮಲಿಯಾನ್ ನ ಅವರ ಅಡಗುತಾಣದ ಮೇಲೆ ಬುಧವಾರ ಮುಂಜಾನೆಯಲ್ಲಿ ಸಿಟಿಡಿ ದಾಳಿ ನಡೆಸಿತು "ಇದಕ್ಕೆ ಪ್ರತಿಯಾಗಿ ಉಗ್ರರು ಸಿಟಿಡಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಸಿಟಿಡಿ ಪ್ರತಿಕ್ರಿಯೆ ನೀಡಿದ್ದರಿಂದ 9 ಉಗ್ರರು ಹತ್ಯೆಯಾಗಿದ್ದು, ಕತ್ತಲಿನಲ್ಲಿ ನಾಲ್ಕೈದು ಉಗ್ರರು ತಪ್ಪಸಿಕೊಂಡರು" ಎಂದು ಸಿಟಿಡಿ ಹೇಳಿಕೆಯಲ್ಲಿ ತಿಳಿಸಿದೆ.
ಆರು ಕೆಜಿ ಸ್ಫೋಟಕ ವಸ್ತು, ನಾಲ್ಕು ಬಂಧೂಕುಗಳು, ಐದು ಪಿಸ್ತೂಲುಗಳು, ಐದು ದ್ವಿಚಕ್ರ ವಾಹನಗಳು ಮತ್ತು ಬುಲೆಟ್ ಗಳನ್ನು ಸ್ಥಳದಿಂದ ಸಿಟಿಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.