ಲಂಕಾ ಬಗ್ಗೆ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ: ಚೀನಾ

ಶ್ರೀಲಂಕಾಗೆ ಸಂಬಂಧಿಸಿದಂತೆ ಚೀನಾ ಯಾವುದೇ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.
ಲಂಕಾ ಬಗ್ಗೆ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ: ಚೀನಾ
ಲಂಕಾ ಬಗ್ಗೆ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ: ಚೀನಾ

ಕೊಲಂಬೋ: ಶ್ರೀಲಂಕಾಗೆ ಸಂಬಂಧಿಸಿದಂತೆ ಚೀನಾ ಯಾವುದೇ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.

ಶ್ರೀಲಂಕಾದ ಪ್ರಮುಖ ಪತ್ರಿಕೆಗಳ ಸಂಪಾದಕರನ್ನುದ್ದೇಶಿಸಿ ಮಾತನಾಡಿರುವ ಚೀನಾ ರಾಯಭಾರಿ, ಶ್ರೀಲಂಕಾದ ಮಾಧ್ಯಮಗಳು ಹಾಗೂ ಜನತೆ ಸ್ಥಳೀಯ ಶ್ರೀಲಂಕಾದೊಂದಿಗಿನ ಚೀನಾ ಸಹಭಾಗಿತ್ವವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಲಂಕಾದ ಸ್ಥಳೀಯ ರಾಜಕೀಯದಲ್ಲಿ ಚೀನಾ ಹಸ್ತಕ್ಷೇಪ ಮಾಡುವುದಿಲ್ಲ, ಉದ್ಯಮ ನಡೆಸುವುದಕ್ಕಾಗಿ ಚೀನಾದ ಸಂಸ್ಥೆಗಳು ಲಂಕಾದವರಿಗೆ ಲಂಚ ನೀಡಿಲ್ಲ ಎಂದು ಚೀನಾ ರಾಯಭಾರಿ ತಿಳಿಸಿದ್ದಾರೆ.

ಚೀನಾ ಶ್ರೀಲಂಕಾದೊಂದಿಗೆ ಪಾರದರ್ಶಕ ಹಾಗೂ ಮುಕ್ತ ರೀತಿಯಲ್ಲಿ ವ್ಯವಹರಿಸುತ್ತಿದ್ದು, ಯಾವುದೇ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿಂದಿನ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಸ್ವತಃ ಆಸಕ್ತಿ ವಹಿಸಿ ಚೀನಾದ ಸಹಭಾಗಿತ್ವದಲ್ಲಿ ರಾರಂಭಿಸಲು ಉದ್ದೇಶಿಸಲಾಗಿದ್ದ ಕೊಲಂಬೋ ಪೋರ್ಟ್ ಸಿಟಿ ಯೋಜನೆಯನ್ನು ಶ್ರೀಲಂಕಾದ ಹೊಸ ಸರ್ಕಾರ ರದ್ದುಗೊಳಿಸಿರುವ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ಚೀನಾ ರಾಯಭಾರಿ, ಚೀನಾದೊಂದಿಗಿನ ಆರ್ಥಿಕ ಸಹಕಾರವನ್ನು ಶ್ರೀಲಂಕಾ ರಾಜಕೀಯಗೊಳಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಯೋಜನೆಯನ್ನು ರದ್ದುಗೊಳಿಸಿದ್ದರಿಂದ ಚೀನಾ ಕಂಪನಿಗೆ 140 ಮಿಲಿಯನ್ ಡಾಲರ್ ಗಳಷ್ಟು ನಷ್ಟ ಉಂಟಾಗಿದೆ ಎಂದು ಚೀನಾ ರಾಯಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com