ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮತದಾನದ ದಿನ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಿದ ಎಫ್ ಬಿ ಐ

ನವೆಂಬರ್ 8 ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದು ಆಲ್ ಖೈದಾ ಸಂಘಟನೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯನ್ನು ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್
Published on
ವಾಷಿಂಗ್ಟನ್: ನವೆಂಬರ್ 8 ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದು ಆಲ್ ಖೈದಾ ಸಂಘಟನೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯನ್ನು ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ಎಚ್ಚರಿಸಿದೆ. 
ನ್ಯೂಯಾರ್ಕ್, ಟೆಕ್ಸಸ್ ಮತ್ತು ವರ್ಜಿನಿಯಾ ದಾಳಿಯ ಗುರಿಯಾಗಿರುವ ಸಾಧ್ಯತೆಗಳಿವೆ ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ. 
ಮತದಾನಕ್ಕೆ ಕೆಲವು ದಿನಗಳಷ್ಟೇ ಬಾಕಿಯಿದ್ದು, ಜನರಿಗೆ ಎಚ್ಚರಿಕೆಯಿಂದಿರಲು ತಿಳಿಸಿದ್ದು, ಸಂಶಯಾತ್ಮಕ ಚಟುವಟಿಕೆಗಳನ್ನು ಪೊಲೀಸರಿಗೆ ತಿಳಿಸುವಂತೆ ಟೆಕ್ಸಸ್ ಗವರ್ನರ್ ಗ್ರೆಗ್ ಅಬಟ್ ಜನರಿಗೆ ಮನವಿ ಮಾಡಿದ್ದಾರೆ. 
"ಟೆಕ್ಸಸ್ ಜನರು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಆದರೆ ಎಚ್ಚರಿಕೆಯ ಕಣ್ಣಿಟ್ಟಿರಬೇಕು.. ಯಾವುದೇ ಅನುಮಾನಾಸ್ಪದಕ ಚಟುವಟಿಕೆಗಳನ್ನು ಕಾನೂನು ಅಧಿಕಾರಿಗಳ ಗಮನಕ್ಕೆ ತರಬೇಕು" ಎಂದು ಅಬಟ್ ಹೇಳಿದ್ದಾರೆ. 
"ನಾಗರಿಕರ ಸುರಕ್ಷತೆಗಾಗಿ ಎಲ್ಲ ರೀತಿಯ ಕಟ್ಟೆಚ್ಚರಿಕೆ ವಹಿಸಲಾಗುವುದು"ಎಂದು ಕೂಡ ಅವರು ಹೇಳಿದ್ದಾರೆ. 
ನಡೆಯಬುದಾದ ಭಯೋತ್ಪಾದಕ ದಾಳಿಯ ಬಗ್ಗೆ ಸಿಕ್ಕಿರುವ ಬೇಹುಗಾರಿಕಾ ಮಾಹಿತಿಯನ್ನು ಪರಿಶೀಲಿಸುತ್ತಿರುವುದಾಗಲಿ ಎಫ್ ಬಿ ಐ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com