ಗೆಲ್ಲಲಿ, ಸೋಲಲಿ, ಟ್ರಂಪಿಸಮ್ ಗುರುತು ಉಳಿದುಕೊಳ್ಳುತ್ತದೆ

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಸೋಲು ಖಚಿತ ಎಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ. ಆದರೆ ಚುನಾವಣೆಯಲ್ಲಿ ....
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಸೋಲು ಖಚಿತ ಎಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ. ಆದರೆ ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ, ಟ್ರಂಪಿಸಂ ಮಾತ್ರ ಅಚ್ಚಳಿಯದೆ ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.ಟ್ರಂಪ್ ಅಷ್ಟು ಜನಪ್ರಿಯರಾಗಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪುರಾತನ ಪಕ್ಷವಾದ ರಿಪಬ್ಲಿಕನ್ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತದಾರರು ತಮ್ಮ ಉಸಿರನ್ನು ಬಿಗಿ ಬಿಡಿದು ಟ್ರಂಪ್ ಗೆ ಮತ ಚಲಾಯಿಸಿದ್ದಾರೆ.

ಆದರೆ ಟ್ರಂಪ್ ತಮ್ಮ ರಾಜಕೀಯ ಬ್ರಾಂಡ್ ಉಳಿಸಿಕೊಳ್ಳುವ ನೈಪುಣ್ಯತೆ ಹೊಂದಿದ್ದಾರೆ. ಶೇ. 51 ರಷ್ಟು  ಸದಸ್ಯರು ಟ್ರಂಪ್ ಪರವಾಗಿ ಶೇ.33 ರಷ್ಟು ಸದಸ್ಯರು ರಿಪಬ್ಲಿಕನ್ ಪಕ್ಷದ ಚುನಾಯಿತ ಅಧಿಕಾರಿ ಪೌಲ್ ರ್ಯಾನ್ ಅವರ ಪರವಾಗಿದ್ದಾರೆ ಎನ್ನಲಾಗಿದೆ.

ಆದರೆ ಹೆಚ್ಚಿನ ಜನರು ಶೇವ್ತ ಭವನದಲ್ಲಿ ಹಿಲರಿ ಕ್ಲಿಂಟನ್ ಅವರನ್ನು ನೋಡವು ಇಚ್ಚಿಸುತ್ತಿದ್ದಾರೆ. ಆದರೆ ಟ್ರಂಪ್ ರಿಪಬ್ಲಿಕನ್ ಪಕ್ಷವನ್ನು ವಿಭಾಗ ಮಾಡಿದ್ದಾರೆ.ಮುಕ್ತ ವ್ಯಾಪರಕ್ಕೆ ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ. ಆದರೆ ಮುಖ್ಯವಾಗಿ ಕೆಲ ರಿಪಬ್ಲಿಕನ್ ನಾಯಕರುಪ ಟ್ರಂಪ್ ಅವರನ್ನು ದ್ವೇಷಿಸುತ್ತಿದ್ದಾರೆ ಎಂದು ಕೊಲಂಬಿಯಾ ವಿವಿಯ ರಾಜಕೀಯ ತಜ್ಞ ರಾಬರ್ಟ್ ಶಪೀರೋ ಹೇಳಿದ್ದಾರೆ.

ಚುನಾವಣೆ ನಂತರವೂ ಟ್ರಂಪ್ ಮೂವ್ ಮೆಂಟ್ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com