ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಅಧ್ಯಕ್ಷರಾದರೆ, ದೇಶದೊಳಗೆ ಉಗ್ರವಾದಿಗಳು ನುಸುಳುವುದನ್ನು ತಡೆಗಟ್ಟಲು ಸಿರಿಯಾದ ನಿರಾಶ್ರಿತರ ವಲಸೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಿರಿಯಾ ನಿರಾಶ್ರಿತರಿಗೆ ನಮ್ಮ ದೇಶದಲ್ಲಿ ಆಶ್ರಯ ಕಲ್ಪಿಸುವುದರಲ್ಲಿ ಶೇ.550 ರಷ್ಟು ಏರಿಕೆಯಾಗಬೇಕೆಂಬ ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಆಲೋಚನೆ ನಮ್ಮ ಶಾಲೆಗಳಿಗೆ ನಮ್ಮ ದೇಶಕ್ಕೆ ತಲೆಮಾರುಗಳವರೆಗೆ ಭಯೋತ್ಪಾದನೆಯನ್ನು ತರಲಿದೆ. ಒಂದು ವೇಳೆ ನಾನು ಅಧ್ಯಕ್ಷನಾದರೆ ಸಿರಿಯಾ ನಿರಾಶ್ರಿತರ ಯೋಜನೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.