ಅಮೆರಿಕ ಸೆನೆಟ್‍ಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆ

ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಸೆನೆಟ್‍ಗೆ ಆಯ್ಕೆಯಾಗಿದ್ದು, ಈ ಮೂಲಕ ಅಮೆರಿಕ ಸೆನೆಟ್ ಪ್ರವೇಶಿಸಿದ ಭಾರತ ಮೂಲದ ಮೊದಲ...
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್
ನ್ಯೂಯಾರ್ಕ್: ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಸೆನೆಟ್‍ಗೆ ಆಯ್ಕೆಯಾಗಿದ್ದು, ಈ ಮೂಲಕ ಅಮೆರಿಕ ಸೆನೆಟ್ ಪ್ರವೇಶಿಸಿದ ಭಾರತ ಮೂಲದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
51ರ ಹರೆಯದ ಕಮಲಾ ಹ್ಯಾರಿಸ್ ಅವರು ಕ್ಯಾಲಿಫೋರ್ನಿಯಾದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಲೊರೆಟ್ಟಾ ಸಾಂಕೆಜ್ ರನ್ನು ಪರಾಭವಗೊಳಿಸಿದ್ದಾರೆ. 
1960ರಲ್ಲಿ ಕಮಲಾ ಅವರ ತಾಯಿ ಅಮೆರಿಕಕ್ಕೆ ವಲಸೆ ಹೋಗಿದ್ದು, ಜಮೈಕಾ ಮೂಲದ ಅಮೆರಿಕನ್ ಪ್ರಜೆಯನ್ನು ವಿವಾಹವಾಗಿದ್ದರು. ಕಮಲಾ ಅವರು ಕ್ಯಾಲಿಫೋರ್ನಿಯಾದ ಓಕ್ಲೆಂಡ್ ನಲ್ಲಿ ಜನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com