
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಆಯ್ಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
ಆರಂಭಿಕ ಮತ ಎಣಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಮುನ್ನಡೆ ಸಾಧಿಸಿದ್ದರೆ, ಮತ ಎಣಿಕೆ ಮುಂದುವರೆದಂತೆ ಇಬ್ಬರ ನಡುವಿನ ಅಂತರ ಕಡಿಮೆಯಾಗುತ್ತಾ ಬರುತ್ತಿದೆ.
ಅಮೆರಿಕದ ಅಧ್ಯಕ್ಷರಾಗಲು 270 ಪ್ರತಿನಿಧಿಗಳ ಬೆಂಬಲ ಬೇಕು. ಇತ್ತೀಚೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಟ್ರಂಪ್ ಅವರು 244 ಮತಗಳನ್ನು ಪಡೆಯುವ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ, ಹಿಲರಿ ಕ್ಲಿಂಟರ್ ಅವರು 215 ಮತಗಳನ್ನು ಪಡೆಯುವ ಮೂಲಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆಂದು ತಿಳಿದುಬಂದಿದೆ.
ಫ್ಲೋರಿಡಾದ ವರ್ಜಿನಿಯಾ, ಮಿಚಿಗನ್, ವಿಸ್ಕೋನಿಯಾ, ನ್ಯೂ ಹಂಪ್ ಸೈರ್, ಮೊಟನ, ನೆಬ್ರಸ್ಕಾ, ಮಿಸೌರಿ, ಕನ್ಸಾಸ್ ಸೇರಿದಂತೆ ಉತ್ತರ ಕ್ಯಾಲಿಫೋರ್ನಿಯಾ ಹಾಗೂ ಬಹಿಯಾದಲ್ಲಿ ಟ್ರಂಪ್ ಅವರು ಮುನ್ನಡೆಯನ್ನು ಸಾಧಿಸಿದ್ದಾರೆ. ಇನ್ನು ಕೆಲವೆಡೆ ಹಿಲರಿಯವರು ಮುನ್ನಡೆಯನ್ನು ಸಾಧಿಸುತ್ತಿದ್ದಾರೆ. ಇದರಂತೆ ಟ್ರಂಪ್ ಹಾಗೂ ಹಿಲರಿ ನಡುವೆ ತೀವ್ರ ಪೈಪೋಟಿಗಳು ಎದುರಾಗಿದೆ.
ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತದಾನ ಪ್ರಕ್ರಿಯೆ ನಿನ್ನೆಯಷ್ಟೇ ಪೂರ್ಣಗೊಂಡಿತ್ತು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತಮ್ಮ ತಮ್ಮ ಮತಗಳನ್ನು ಚಲಾಯಿಸಿದ್ದರು. ಅಮೆರಿಕದ ಸುಮಾರು 20 ಕೋಟಿ ಮತದಾರರು ಮತ ಚಲಾಯಿಸಿದ್ದರು. ಇದೀಗ ಮತ ಎಣಿಕೆಯ ಪ್ರಕ್ರಿಯೆ ಆರಂಭಗೊಂಡಿದ್ದು, ಯಾರು ಅಮೆರಿಕ ರಾಷ್ಟ್ರದ ಅಧ್ಯಕ್ಷ ಸ್ಥಾನವನ್ನು ಏರಲಿದ್ದಾರೆಂಬ ಕುತೂಹಲಗಳು ಎಲ್ಲೆಡೆ ಮೂಡತೊಡಗಿವೆ.
Advertisement