
ಕಠ್ಮಂಡು: ದೇಶದ ಹಣಕಾಸು ವಿನಿಮಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತೀಯ ಕರೆನ್ಸಿ ಬಗ್ಗೆ ಮಾಹಿತಿ ನೀಡಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್'ಬಿಐ) ನೇಪಾಳ ರಾಷ್ಟ್ರ ಬ್ಯಾಂಕ್ ಗಳಿಗೆ ಶುಕ್ರವಾರ ಕೇಳಿದೆ.
ಭ್ರಷ್ಟಾಚಾರ ಹಾಗೂ ಖೋಟಾನೋಟುಗಳ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿತ್ತು. ಈ ಹಿನ್ನಲೆಯಲ್ಲಿ ತಮ್ಮಲ್ಲಿರುವ ಭಾರತೀಯ ಕರೆನ್ಸಿ ಬಗ್ಗೆ ಮಾಹಿತಿ ಕೊಡಿ ಎಂದು ನೇಪಾಳ ರಾಷ್ಟ್ರ ಬ್ಯಾಂಕ್ ಗಳ ಆರ್ ಬಿಐ ಕೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ನೇಪಾಳ ರಾಷ್ಟ್ರ ಬ್ಯಾಂಕ್ ಗಳ ವಿದೇಶಿ ವಿನಿಮಯ ನಿರ್ವಹಣಾ ವಿಭಾಗದ ಮುಖ್ಯಸ್ಥ ಭೀಷ್ಮ ರಾಜ್ ಧುಂಗಾಣಾ ಅವರು, ಬ್ಯಾಂಕುಗಳು ನೀಡಿರುವ ಹಣ ವಿನಿಮಯ ಕೇಂದ್ರ, ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕುಗಳು ರು.500 ಹಾಗೂ 1,000 ಮುಖಬೆಲೆ ನೋಟಿನ 35 ಮಿಲಿಯನ್ ರಷ್ಟು ಭಾರತೀಯ ಹಣ ನೇಪಾಳದಲ್ಲಿದೆ ಎಂದು ಮಾಹಿತಿ ನೀಡಿವೆ. ಈ ಮಾಹಿತಿ ಆಧಾರದ ಮೇಲೆ ಕೇಂದ್ರೀಯ ಬ್ಯಾಂಕ್ ಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
Advertisement