ರದ್ದುಗೊಂಡಿರುವ ನೋಟುಗಳು ಚೀನಾದಲ್ಲಿರುವ ಭಾರತದ ಬ್ಯಾಂಕ್ ಗಳಲ್ಲಿಯೂ ವರ್ಜ್ಯ!

ಚೀನಾದಲ್ಲಿರುವ ಭಾರತೀಯರು ಅಲ್ಲಿರುವ ಭಾರತೀಯ ಬ್ಯಾಂಕ್ ಗಳಲ್ಲಿ ರದ್ದುಗೊಂಡಿರುವ 500, 1000 ರೂ ನೋಟುಗಳನ್ನು ಜಮಾ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ರದ್ದುಗೊಂಡಿರುವ ನೋಟುಗಳು ಚೀನಾದಲ್ಲಿರುವ ಭಾರತದ ಬ್ಯಾಂಕ್ ಗಳಲ್ಲಿಯೂ ವರ್ಜ್ಯ!
ರದ್ದುಗೊಂಡಿರುವ ನೋಟುಗಳು ಚೀನಾದಲ್ಲಿರುವ ಭಾರತದ ಬ್ಯಾಂಕ್ ಗಳಲ್ಲಿಯೂ ವರ್ಜ್ಯ!
ಬೀಜಿಂಗ್: ಚೀನಾದಲ್ಲಿರುವ ಭಾರತೀಯರು ಅಲ್ಲಿರುವ ಭಾರತೀಯ ಬ್ಯಾಂಕ್ ಗಳಲ್ಲಿ ರದ್ದುಗೊಂಡಿರುವ 500, 1000 ರೂ ನೋಟುಗಳನ್ನು ಜಮಾ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. 
ಭಾರತದಲ್ಲಿ ರದ್ದುಗೊಂಡಿರುವ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾ ಮಾಡುವ ಬಗ್ಗೆ ಸಲಹೆ ನೀಡಿರುವ ಭಾರತೀಯ ರಾಯಭಾರಿ ಕಚೇರಿ, ಚೀನಾದಲ್ಲಿರುವ ಭಾರತೀಯರು 500, 1000 ರೂ ನೋಟುಗಳನ್ನು  ಚೀನಾ ಹಾಗೂ ಹಾಂಗ್ ಕಾಂಗ್ ನಲ್ಲಿರುವ ಭಾರತೀಯ ಬ್ಯಾಂಕ್ ಗಳಲ್ಲಿ ಜಮಾ ಮಾಡುವಂತಿಲ್ಲ, ಒಂದು ವೇಳೆ ಖಾತೆಗೆ ಜಮಾ ಮಾಡುವುದಿದ್ದರೆ, ಖಾತೆಗೆ 500, 1000 ರೂ ನೋಟುಗಳನ್ನು ಜಮಾ ಮಾಡಲು ಭಾರತದಲ್ಲಿರುವ ಮತ್ತೋರ್ವ ವ್ಯಕ್ತಿಗೆ ಅನುವು ಮಾಡಿಕೊಡುವ ಬಗ್ಗೆ ಲಿಖಿತ ರೂಪದಲ್ಲಿ ಪ್ರಮಾಣೀಕರಿಸಬೇಕು ಎಂದು ರಾಯಭಾರಿ ಇಲಾಖೆ ಸೂಚಿಸಿದೆ. 
ಚೀನಾದಲ್ಲಿರುವ ಭಾರತೀಯರು ಯಾವ ವ್ಯಕ್ತಿಗೆ ಬ್ಯಾಂಕ್ ಖಾತೆಯಲ್ಲಿ 500, 1000 ರೂ ಜಮಾ ಮಾಡಲು ಅನುವು ಮಾಡಿಕೊಟ್ಟಿರುತ್ತಾರೋ ಅವರು ನಿರ್ದಿಷ್ಟ ನೋಟು, ಪ್ರಮಾಣೀಕೃತ ಪತ್ರ ಹಾಗೂ ದಾಖಲೆಗಳ ಸಹಿತ ಭಾರತೀಯ  ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಬಹುದು ಎಂದು ರಾಯಭಾರಿ ಇಲಾಖೆ ಹೇಳಿದೆ. ಚೀನಾದ ಬೀಜಿಂಗ್ ಶಾಂಘೈ ಹಾಗೂ ಗುವಾಂಗ್ಝೌ ನಗರಗಳಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಚೀನಾದಲ್ಲಿ ಒಟ್ಟು 7 ಭಾರತೀಯ ಮೂಲದ ಬ್ಯಾಂಕ್ ಗಳಿದ್ದು ಈ ಪೈಕಿ 2 ಖಾಸಗಿ ವಲಯದ್ದಾಗಿದೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದಲ್ಲಿರುವ ಭಾರತೀಯ ವ್ಯಕ್ತಿ ಇಶಾ ಲುಥ್ರಾ, ಡಿಸೆಂಬರ್ 30 ರೊಳಗೆ ನಾನು ಭಾರತಕ್ಕೆ ಒಮ್ಮೆ ಭೇಟಿ ನೀಡುತ್ತಿರುವುದು ಅತ್ಯಂತ ಸಂತೋಷ ಮೂಡಿಸಿದೆ ಇದಕ್ಕಾಗಿ ನಾನು ಹೆಚ್ಚು ಕೃತಜ್ಞವಾಗಿರುತ್ತೇನೆ ಎಂದು ಹೇಳಿದ್ದಾರೆ. ನ.8 ರಂದು ಕೇಂದ್ರ ಸರ್ಕಾರ 500, 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ, ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಡಿ.30 ರ ವರೆಗೆ ಕಾಲಾವಕಾಶ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com