ನ್ಯೂಯಾರ್ಕ್ ಟೈಮ್ಸ್ ನೊಂದಿಗಿನ ಭೇಟಿಯನ್ನು ರದ್ದುಗೊಳಿಸಿದ ಟ್ರಂಪ್!

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಟೈಮ್ಸ್ ನೊಂದಿಗಿನ ಭೇಟಿಯನ್ನು ರದ್ದುಗೊಳಿಸಿದ್ದು, ಸುದ್ದಿ ಸಂಸ್ಥೆ ಕೊನೆಯ ಕ್ಷಣದಲ್ಲಿ ಅಧಿವೇಶನದ ಷರತ್ತುಗಳನ್ನು ಬದಲಿಸಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಟೈಮ್ಸ್ ನೊಂದಿಗಿನ ಭೇಟಿಯನ್ನು ರದ್ದುಗೊಳಿಸಿದ್ದು, ಸುದ್ದಿ ಸಂಸ್ಥೆ  ಕೊನೆಯ ಕ್ಷಣದಲ್ಲಿ ಅಧಿವೇಶನದ ಷರತ್ತುಗಳನ್ನು ಬದಲಿಸಿದೆ ಎಂದು ಆರೋಪಿಸಿದ್ದಾರೆ. 
ಆದರೆ ನ್ಯೂಯಾರ್ಕ್ ಟೈಮ್ಸ್ ಪತ್ರಿಮೆ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ನಿರಾಕರಿಸಿದ್ದು, ನಿಗದಿಯಾಗಿದ್ದ ಕಾರ್ಯಕ್ರಮದ ನಿಯಮಗಳನ್ನು ಬದಲಾವಣೆ ಮಾಡಲು ಟ್ರಂಪ್ ಬೆಂಬಲಿಗರು ಯತ್ನಿಸಿದರು ಎಂದು ಪ್ರತ್ಯಾರೋಪ ಮಾಡಿದೆ. 
ಡೊನಾಲ್ಡ್ ಟ್ರಂಪ್ ಅವರು ಟೈಮ್ಸ್ ನ ವರದಿಗಾರರು, ಸಂಪಾದಕರು ಹಾಗೂ ಅಂಕಣಕಾರರನ್ನು ಭೇಟಿ ಮಾಡಿ ಸಂವಾದ ನಡೆಸುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದರ ಬಗ್ಗೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಟೈಮ್ಸ್ ಕೊನೆಯ ಕ್ಷಣದಲ್ಲಿ ಷರತ್ತುಗಳನ್ನು ಬದಲಾವಣೆ ಮಾಡಿದೆ ಎಂದು ಆರೋಪಿಸಿದ್ದಾರೆ. ನನ್ನನ್ನು ತಪ್ಪಾಗಿ ತೋರಿಸಲು ಯತ್ನಿಸಲಾಗುತ್ತಿದೆ, ಯಾವುದೇ ಕ್ಷಣದಲ್ಲಿ ಮತ್ತೊಂದು ಭೇಟಿ ನಡೆಯಲಿದೆ ಎಂದು ಟ್ರಂಪ್ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 
ಡೊನಾಲ್ಡ್ ಟ್ರಂಪ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂವಹನ ವಿಭಾಗದ ಉಪಾಧ್ಯಕ್ಷ " ನಾವು ಮೂಲ ನಿಯಮಗಳನ್ನು ಬದಲಾವಣೆ ಮಾಡಿಲ್ಲ, ಮಾಡಲು ಯತ್ನಿಸಿಯೂ ಇಲ್ಲ ಎಂದು ಟ್ರಂಪ್ ಆರೋಪವನ್ನು ತಳ್ಳಿಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com