ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನ

ಕ್ಯೂಬಾದ ಕ್ರಾಂತಿಕಾರಿ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನರಾಗಿದ್ದು, ಅವರಿಗೆ 90 ವರ್ಷ ವಯಸ್ಸಾಗಿತ್ತು.
ಫಿಡೆಲ್ ಕ್ಯಾಸ್ಟ್ರೋ (ಸಂಗ್ರಹ ಚಿತ್ರ)
ಫಿಡೆಲ್ ಕ್ಯಾಸ್ಟ್ರೋ (ಸಂಗ್ರಹ ಚಿತ್ರ)

ಹವಾನಾ: ಕ್ಯೂಬಾದ ಕ್ರಾಂತಿಕಾರಿ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನರಾಗಿದ್ದು, ಅವರಿಗೆ 90 ವರ್ಷ ವಯಸ್ಸಾಗಿತ್ತು.

ಫಿಡೆಲ್ ಕ್ಯಾಸ್ಟ್ರೋ ನಿಧನ ವಿಚಾರವನ್ನು ಸ್ವತಃ ಅವರ ಸಹೋದರ ಮತ್ತು ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಸರ್ಕಾರಿ ಸ್ವಾಮ್ಯದ ವಾಹಿನಿಗೆ ತಿಳಿಸಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ ಅವರಿಗೆ 90 ವರ್ಷ ವಯಸ್ಸಾಗಿದ್ದು, ಅವರು  ದೀರ್ಘಕಾಲದಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ಅವರು 2008ರಲ್ಲಿ ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋ ಅವರಿಗೆ ಕ್ಯೂಬಾ ಅಧ್ಯಕ್ಷ ಸ್ಥಾನ ಮತ್ತು ಅಧಿಕಾರವನ್ನು ಹಸ್ತಾಂತರಿಸಿದ್ದರು.

1926ರಲ್ಲಿ ಕ್ಯೂಬಾದ ಆಗ್ನೇಯ ಪೂರ್ವ ಪ್ರಾಂತ್ಯದಲ್ಲಿ ಜನಿಸಿದ ಕ್ಯಾಸ್ಟ್ರೋ, 1953ರಲ್ಲಿ ಅಂದು ಆಡಳಿತ ನಡೆಸುತ್ತಿದ್ದ ಬಟಿಸ್ಟಾ ರೆಜಿಮ್ ನ ವಿರುದ್ಧ ಹೋರಾಡಿ ಜೈಲು ಸೇರಿದ್ದರು. 1955ರಲ್ಲಿ ಬಿಡುಗಡೆಯಾದ ಕ್ಯಾಸ್ಟ್ಕೋ, 1956ರಲ್ಲಿ  ಮತ್ತದೇ ಬಟಿಸ್ಟಾ ರೆಜಿಮ್ ನ ವಿರುದ್ಧ ಚೆಗುವೆರಾ ಜೊತೆಗೂಡಿ ಗೆರಿಲ್ಲಾ ಯುದ್ಧ ಮಾಡಿದ್ದರು. ಬಳಿಕ 1959ರಲ್ಲಿ ಬಟಿಸ್ಟಾ ರೆಜಿಮೆಂಟ್ ಅನ್ನು ಸೋಲಿಸಿದ ಫೆಡೆಲ್ ಕ್ಯಾಸ್ಟ್ರೋ ಮೊದಲ ಬಾರಿಗೆ ಕ್ಯೂಬಾದ ಅಧ್ಯಕ್ಷರಾಗಿ ಆಯ್ಕೆಯಾದರು.  1976ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಮ್ಯೂನಿಸ್ಟ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕ್ಯಾಸ್ಟ್ರೋ ಮತ್ತೆ ಅಧ್ಯಕ್ಷಗಾದಿಗೇರಿದರು.

ಸುಮಾರು ಅರ್ಧ ಶತಮಾನಗಳ ಕ್ಯೂಬಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಫಿಡೆಲ್ ಕ್ಯಾಸ್ಟ್ರೋ, 2008ರಲ್ಲಿ ತಮ್ಮ ಅನಾರೋಗ್ಯದ ನಿಮಿತ್ತ ಕ್ಯಾಸ್ಟ್ರೋ ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರ ಹಸ್ತಾಂತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com