ಯುಎಸ್ ಯುಕೆ ಒತ್ತಡದ ನಡುವೆಯೂ ಉರಿ ದಾಳಿಯನ್ನು ಖಂಡಿಸಲು ನಿರಾಕರಿಸಿದ ನವಾಜ್ ಷರೀಫ್

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವಂತೆ ಅಮೆರಿಕ, ಬ್ರಿಟನ್ ಒತ್ತಾಯಿಸಿದ್ದರೂ, ದಾಳಿಯನ್ನು ಖಂಡಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಿರಾಕರಿಸಿದ್ದಾರೆ.
ನವಾಜ್ ಷರೀಫ್
ನವಾಜ್ ಷರೀಫ್

ಇಸ್ಲಾಮಾಬಾದ್: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವಂತೆ ಅಮೆರಿಕ, ಬ್ರಿಟನ್ ಒತ್ತಾಯಿಸಿದ್ದರೂ, ದಾಳಿಯನ್ನು ಖಂಡಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಿರಾಕರಿಸಿದ್ದಾರೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ಅಮೆರಿಕದ ರಕ್ಷಣಾ ಸಚಿವ ಜಾನ್ ಕೆರ್ರಿ ಹಾಗೂ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಯಿಸದ್ದ ವೇಳೆ ಎರಡೂ ರಾಷ್ಟ್ರದ ನಾಯಕರು ಉರಿ ದಾಳಿಯನ್ನು ಖಂಡಿಸುವಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೆ ಸಲಹೆ ನೀಡಿದ್ದರು ಎಂದು ನ್ಯೂಸ್ ಇಂಟರ್ ನ್ಯಾಷನಲ್ ವರದಿ ಪ್ರಕಟಿಸಿದೆ.

ಆದರೆ ಉರಿ ದಾಳಿಯನ್ನು ಖಂಡಿಸಲು ನಿರಾಕರಿಸಿದ್ದ ನವಾಜ್ ಷರೀಫ್, ಬ್ರಿಟನ್, ಅಮೆರಿಕ ನಾಯಕರಿಗೆ ಪ್ರತಿಪ್ರಶ್ನೆಯೊಡ್ಡಿ, ಕಾಶ್ಮೀರದಲ್ಲಿ ಉಂಟಾಗಿರುವ ಗಲಭೆ ಪರಿಸ್ಥಿತಿಯ ಬಗ್ಗೆ ಏಕೆ ಮೌನ ವಹಿಸಿದ್ದೀರಿ ಎಂದು ಕೇಳಿದ್ದಾರೆ. ಉರಿ ದಾಳಿಯ ವಿಷಯದಲ್ಲಿ ಭಾರತ ಪಾಕಿಸ್ತಾನ ಹಾಗೂ ಪಾಕ್ ನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಗಂಭೀರ ಆರೋಪ ಮಾಡುತ್ತಿದೆ. ಆದರೆ ತಾನು ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಅದಕ್ಕೆ ಅರಿವಿಲ್ಲ ಎಂದು ನವಾಜ್ ಷರೀಫ್ ವಾದಿಸಿದ್ದಾರೆ. ಕಾಶ್ಮೀರ ಜನತೆಯ ಹತ್ಯೆಯ ಬಗ್ಗೆ ಲಂಡನ್, ವಾಷಿಂಗ್ ಟನ್ ಸೇರಿದಂತೆ ವಿಶ್ವಸಮುದಾಯ ಕಣ್ಮುಚ್ಚಿ ಕುಳಿತಿದೆ ಎಂದು ನವಾಜ್ ಷರೀಫ್ ಬ್ರಿಟನ್, ಅಮೆರಿಕ ನಾಯಕರೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು  ನ್ಯೂಸ್ ಇಂಟರ್ ನ್ಯಾಷನಲ್ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com