ಪಾಕ್ ವಿರುದ್ಧದ ಆನ್ ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ತಳ್ಳಿದ ಅಮೆರಿಕ!: ಕನಿಷ್ಠ ಸಂಖ್ಯೆಯ ಸಹಿಯೂ ಬಂದಿಲ್ಲ ಎಂಬ ಸ್ಪಷ್ಟನೆ

ವಿಶ್ವಾದ್ಯಂತ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಾರೆ, ಈ ವರೆಗೂ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಳೆದಿರುವಂತೆ ಪೋಸು ಕೊಡುತ್ತಿದ್ದ ಅಮೆರಿಕ ತನ್ನ ದ್ವಂದ್ವ ನಿಲುವನ್ನು ಮತ್ತೆ ಪ್ರದರ್ಶಿಸಿದೆ.
ಪಾಕ್ ವಿರುದ್ಧ ಆನ್ ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ತಳ್ಳಿದ ಅಮೆರಿಕ!
ಪಾಕ್ ವಿರುದ್ಧ ಆನ್ ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ತಳ್ಳಿದ ಅಮೆರಿಕ!

ವಾಷಿಂಗ್ ಟನ್: ವಿಶ್ವಾದ್ಯಂತ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಾರೆ, ಈ ವರೆಗೂ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಳೆದಿರುವಂತೆ ಪೋಸು ಕೊಡುತ್ತಿದ್ದ ಅಮೆರಿಕ ತನ್ನ ದ್ವಂದ್ವ ನಿಲುವನ್ನು ಮತ್ತೆ ಪ್ರದರ್ಶಿಸಿದೆ.

ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನದ ವೆಬ್ ಸೈಟ್ ಪ್ರಾರಂಭಿಸಿದ ಆನ್ ಲೈನ್ ಅರ್ಜಿ ಯನ್ನು ಏಕಾಏಕಿ ಆರ್ಕೈವ್ ಪಟ್ಟಿಗೆ ಸೇರಿಸಿದೆ ಅರ್ಥಾತ್, ಇನ್ನು ಮುಂದೆ ಈ ಆನ್ ಲೈನ್ ಅರ್ಜಿಗೆ ಯಾರೂ ಸಹ ಸಹಿ ಹಾಕುವ ಅವಕಾಶ ಇರುವುದಿಲ್ಲ. ಆನ್ ಲೈನ್ ಅರ್ಜಿಯನ್ನು ಏಕಾಏಕಿ  ಆರ್ಕೈವ್ ಪಟ್ಟಿಗೆ ಸೇರಿಸಿವುದಕ್ಕೆ ಅಮೆರಿಕ ನೀಡಿರುವ ಕಾರಣ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಈ ವರೆಗೂ ಆನ್ ಲೈನ್ ಅರ್ಜಿಗೆ ಅಗತ್ಯವಿದ್ದ ಕನಿಷ್ಠ ಸಹಿಗಳಿಗಿಂತ 5 ಪಟ್ಟು ಹೆಚ್ಚು ಸಹಿ ಸಂಗ್ರಹವಾಗಿತ್ತು. ಆದರೆ ಇದೆಲ್ಲವನ್ನು ಬದಿಗಿರಿಸಿ ಅಮೆರಿಕ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದನ್ನು ಪರಿಗಣಿಸಲು ಪರಿಗಣಿಸಲು ಆನ್ ಲೈನ್ ಅರ್ಜಿ ಕನಿಷ್ಠ ಸಹಿ ಅಗತ್ಯತೆಯಾಗಳನ್ನು ಪೂರೈಸಿಲ್ಲ ಎಂಬ ಕಾರಣ ನೀಡಿದೆ!.

ಅಕ್ಟೊಬರ್.3 ರಂದು ಪ್ರಕಟವಾದ ವರದಿಯ ಪ್ರಕಾರ ಆನ್ ಲೈನ್ ಅರ್ಜಿ ಪ್ರಾರಂಭವಾದ 6 ದಿನಗಳಲ್ಲೇ ಪರಿಗಣಿಸಲು ಅರ್ಹತೆ ಪಡೆಯಲು ಕನಿಷ್ಠ ಸಹಿಗಳನ್ನು ಪಡೆದಿತ್ತು. ಅಲ್ಲದೆ ಈ ವರೆಗೂ ಅರ್ಧ ಮಿಲಿಯನ್ ನಷ್ಟು ಜನರು ಸಹಿ ಹಾಕಿದ್ದಾರೆ ಎಂದು ಹೇಳಲಾಗಿತ್ತು. ಸಹಿ ಸಂಗ್ರಹ ಇದೆ ರೀತಿ ಮುಂದುವರೆದರೆ ಆನ್ ಲೈನ್ ಅರ್ಜಿಗೆ ಸಹಿ ಹಾಕಲು ನೀಡಲಾಗಿರುವ ಗಡುವು ಮುಕ್ತಾಯಗೊಳ್ಳುವ ವೇಳೆಗೆ ಸಹಿ ಸಂಖ್ಯೆ ಒಂದು ಮಿಲಿಯನ್ ದಾಟುತ್ತದೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ ಅಮೆರಿಕ ಉಲ್ಟಾ ಹೊಡೆದಿದ್ದು, ಕನಿಷ್ಠ ಸಹಿಗಳು ಬಾರದೆ ಇರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಸೇರಿಸಲಾಗಿದೆ ಎಂದು ಒಂದು ಸಾಲಿನ ಸ್ಪಷ್ಟನೆಯನ್ನಷ್ಟೇ ನೀಡಿದೆ. ಸೆ.21 ರಂದು ಪ್ರಾರಂಭವಾಗಿದ್ದ ಅರ್ಜಿಗೆ 6 ದಿನಗಳಲ್ಲೇ ಒಂದು ಲಕ್ಷ ಸಹಿ ದಾಖಲಾಗಿತ್ತು. ಆದರೆ ಕನಿಷ್ಠ ಸಹಿ ಸಂಗ್ರಹಣೆಯಿಂದ ಪಾಕ್ ನ್ನು ಉಗ್ರ ರಾಷ್ಟ್ರವೆಂದು ಘೋಷಿಸುವ ಬಗ್ಗೆ ನಿಲುವು ಪ್ರಕಟಿಸುವ ಅನಿವಾರ್ಯತೆಗೆ ಸಿಲುಕಿದ್ದ ಅಮೆರಿಕ ಆಡಳಿತ, ಕನಿಷ್ಠ ಸಹಿ ಸಂಗ್ರಹ ಆಗಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ, ಭಯೋತ್ಪಾದನೆ ವಿಷಯದಲ್ಲಿ ತನ್ನ ದ್ವಂದ್ವ ನಿಲುವನ್ನು ಪ್ರದರ್ಶಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com