
ವಾಷಿಂಗ್ಟನ್: 24 ವರ್ಷದ ಮಹಿಳೆ ಗೊತ್ತಿಲ್ಲದೇ 68 ವರ್ಷದ ತನ್ನ ಅಜ್ಜನನ್ನೆ ವಿವಾಹವಾಗಿರುವ ಘಟನೆ ವಾಷಿಂಗ್ಟನ್ ನಲ್ಲಿ ನಡೆದಿದೆ.
ಫ್ಲೋರಿಡಾದ ಮಿಯಾಮಿ ಗೋಲ್ಡನ್ ಬೀಚ್ ನಲ್ಲಿ ವಾಸವಾಗಿರುವ ಈ ಜೋಡಿ ಮೂರು ತಿಂಗಳ ಹಿಂದೆ ವಿವಾಹವಾಗಿತ್ತುಯ ಇತ್ತೀಚೆಗೆ ತಮ್ಮ ಫೋಟೋ ಆಲ್ಬಂ ನೋಡಿಕೊಳ್ಳುವಾಗ ಈ ಜೋಡಿಗೆ ತಾವಿಬ್ಬರು ತಾತ ಮೊಮ್ಮಗಳು ಎಂದು ಗೊತ್ತಾಗಿದೆ.
ಅಲ್ಬಂನಲ್ಲಿ ವ್ಯಕ್ತಿಯ ಮೊದಲ ಹೆಂಡತಿಯಿಂದ ಪಡೆದ ಮಕ್ಕಳ ಫೋಟೋಗಳಿದ್ದವು. ಅವುಗಳ ಪೈಕಿ ಒಂದು ಚಿತ್ರ ಯುವತಿಯ ತಂದೆಯದ್ದಾಗಿತ್ತು!
ಮೊದಲನೇ ಹೆಂಡತಿಯಿಂದ ದೂರವಾಗಿದ್ದ ವೃದ್ಧ ಇನ್ನೊಂದು ಮದುವೆಯಾಗಿದ್ದ. ಆದರೆ ಹಣಕಾಸಿನ ವಿಷ,ಯದಲ್ಲಿ ಇಬ್ಬರಿಗೂ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದಿದ್ದರು. ಅದಾದ 2 ವರ್ಷಗಳ ನಂತರ ಆತನಿಗೆ ಬೃಹತ್ ಮೊತ್ತದ ಲಾಟರಿ ಹೊಡೆದಿತ್ತು. ತನ್ನ ಸಂಪತ್ತು ಹಾಳಾಗಬಾರದು ಎಂದು ಮತ್ತೊಂದು ಮದುವೆಗೆ ನಿರ್ಧರಿಸಿ ಸ್ಥಳೀಯ ಡೇಟಿಂಗ್ ಸೈಟ್ ನಲ್ಲಿ ವಧುವಿಗಾಗಿ ಹುಡುಕಾಡಿದ್ದಾನೆ. ನಂತರ ತಾನು ವಿವಾಹವಾಗಿರುವ ಮಹಿಳೆ ಮೇಲೆ ಆಕರ್ಷಿತಗೊಂಡಿದ್ದಾನೆ.
ಅನೈತಿಕ ಸಂಬಂಧದಿಂದ ಗರ್ಭ ಧರಿಸಿದ್ದಕ್ಕಾಗಿ ಆಕೆಯ ತಂದೆ (ವೃದ್ಧನ ಪುತ್ರ) ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ದಿಕ್ಕಿಲ್ಲದ ವೇಳೆ ಆಶ್ರಯದಾತನಾಗಿ ಆನ್‌ಲೈನ್‌ನಲ್ಲಿ ಸಂಬಂಧ ಹುಡುಕಿಕೊಡು ಬಂದ ಕೋಟ್ಯಾಧಿಪತಿ ವೃದ್ಧನನ್ನು ಜೊತೆಯಾಗಲು ಮನಸ್ಸು ಮಾಡಿದಳು.
ನಂತರ ವೃದ್ಧನ ಫೋಟೋ ಆಲ್ಬಂ ನಲ್ಲಿ ತಂದೆಯ ಫೋಟೋ ನೋಡಿ ಆಕೆಗೆ ಶಾಕ್ ಆಗಿದೆ. ಈಗಿದ್ದರೂ ನಾವು ಬೇರಾಗುವುದಿಲ್ಲ. ನಾವು ಜೊತೆಯಾಗಿಯೇ ಇರುತ್ತೇವೆ ಎಂದು ಆಕೆ ಪ್ರತಿಕ್ರಿಯಿಸಿದ್ದಾಳೆ.
Advertisement