ಎಂಹೆಚ್ 370 ಅವಶೇಷ ಮಾರಿಷಸ್ ನಲ್ಲಿ ಪತ್ತೆ: ಮಲೇಷ್ಯಾ ಸರ್ಕಾರದ ಹೇಳಿಕೆ

2014ರ ಮಾರ್ಚ್ ನಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾ ಏರ್ ಲೈನ್ಸ್ ಗೆ ಸೇರಿದ ಎಂಹೆಚ್ 370 ವಿಮಾನದ ಅವಶೇಷಗಳು ಮಾರಿಷಸ್ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಮಲೇಷ್ಯಾ ಸರ್ಕಾರ ಹೇಳಿದೆ.
ಎಂಹೆಚ್ 370 ವಿಮಾನದ ಅವಶೇಷ ಪತ್ತೆ (ಸಂಗ್ರಹ ಚಿತ್ರ)
ಎಂಹೆಚ್ 370 ವಿಮಾನದ ಅವಶೇಷ ಪತ್ತೆ (ಸಂಗ್ರಹ ಚಿತ್ರ)

ಕೌಲಾಲಂಪುರ: 2014ರ ಮಾರ್ಚ್ ನಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾ ಏರ್ ಲೈನ್ಸ್ ಗೆ ಸೇರಿದ ಎಂಹೆಚ್ 370 ವಿಮಾನದ ಅವಶೇಷಗಳು ಮಾರಿಷಸ್ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು  ಮಲೇಷ್ಯಾ ಸರ್ಕಾರ ಹೇಳಿದೆ.

2 ವರ್ಷಗಳ ಹಿಂದೆ ಮಲೇಷ್ಯಾದ ಕೌಲಾಲಂಪುರದಿಂದ ಚೀನಾದ ಬೀಜಿಂಗ್ ಗೆ ತೆರಳುತ್ತಿದ್ದ ವಿಮಾನ ಸಮುದ್ರದಲ್ಲಿ ಪತನವಾಗಿ ಸುಮಾರು ಎರಡೂವರೆ ವರ್ಷಗಳ ಬಳಿಕ ವಿಮಾನದ ಅವಶೇಷ  ಪತ್ತೆಯಾಗಿದೆ ಎಂದು ಮಲೇಷ್ಯಾ ಸರ್ಕಾರ ತಿಳಿಸಿದೆ. ಆಸ್ಟ್ರೇಲಿಯಾದ ಸಾರಿಗೆ ಭದ್ರತಾ ದಳದ ಅಧಿಕಾರಿಗಳ ಸಮೀಕ್ಷೆಗಳ ಆಧಾರದ ಮೇಲೆ ಪ್ರಸ್ತುತ ಮಾರಿಷಸ್ ನಲ್ಲಿ ಪತ್ತೆಯಾಗಿರುವ  ಅವಶೇಷ ಎಂಹೆಚ್ 370 ವಿಮಾನದ್ದೇ ಎಂದು ಹೇಳಲಾಗುತ್ತಿದೆ. ಮಾರಿಷಸ್ ನಲ್ಲಿ ವಿಮಾನದ ರೆಕ್ಕೆ ಪತ್ತೆಯಾಗಿದ್ದು, ಇದು ಎಂಹೆಚ್ 370 ವಿಮಾನದ್ದೇ ಎಂದು ಶಂಕೆ ವ್ಯಕ್ತವಾಗಿತ್ತು. ಆದರೆ ಈ  ಬಗ್ಗೆ ಶಂಕೆ ನಿವಾರಿಸಿರುವ ಆಸ್ಟ್ರೇಲಿಯಾ ಇದು ಎಂಹೆಚ್ 370 ವಿಮಾನದ್ದೇ ಆಗಿದೆ ಎಂದು ಸರ್ಕಾರಕ್ಕೆ ತಿಳಿಸಿದೆ.

ಇದರ ಆಧಾರದ ಮೇಲೆ ಪ್ರಸ್ತುತ ಪತ್ತೆಯಾಗಿರುವ ಅವಶೇಷ ಎಂಹೆಚ್ 370 ವಿಮಾನದ್ದಾಗಿದೆ ಎಂದು ಮಲೇಷ್ಯಾ ಸರ್ಕಾರ ಹೇಳಿದೆ. 2014ರ ಮಾರ್ಚ್ ನಲ್ಲಿ ನಾಪತ್ತೆಯಾಗಿದ್ದ ವಿಮಾನದ  ಅವಶೇಷ ಬರೊಬ್ಬರಿ ಒಂದು ವರ್ಷಗಳ ಬಳಿಕ ಫ್ರೆಂಚ್ ಐಲೆಂಡ್ ನಲ್ಲಿ 2015ರ ಜುಲೈನಲ್ಲಿ ಪತ್ತೆಯಾಗಿತ್ತು. ಎರಡನೇ ಅವಶೇಷ ತಾಂಜೇನಿಯಾದ ಪೆಂಬಾ ಐಲೆಂಡ್ ನಲ್ಲಿ ಪತ್ತೆಯಾಗಿತ್ತು.  ಇದೀಗ ವಿಮಾನದ ರೆಕ್ಕೆ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com