ಚೈನಾ ಆರ್ಥಿಕ ಸ್ಥಿತಿ ನಿರೀಕ್ಷೆಗಿಂತಲೂ ವೃದ್ಧಿಸಿದೆ: ಚೈನಾ ಪ್ರಧಾನಿ

ಈ ವರ್ಷ ನಿರೀಕ್ಷೆಗಿಂತಲೂ ಚೈನಾದ ಆರ್ಥಿಕ ಸ್ಥಿತಿ ವೃದ್ಧಿಸಿದೆ ಎಂದು ಚೈನಾ ಪ್ರಧಾನಿ ಲಿ ಕೇಕ್ವಿಂಗ್ ಮಂಗಳವಾರ ಹೇಳಿದ್ದಾರೆ. ಉದ್ಯೋಗಳು ಹೆಚ್ಚಿದ್ದು, ಪ್ರಾದೇಶಿಕ ಬಳಕೆ ಮತ್ತು ಸೇವಾ ಉದ್ದಿಮೆ ಸಮಗ್ರ
ಚೈನಾ ಪ್ರಧಾನಿ ಲಿ ಕೇಕ್ವಿಂಗ್
ಚೈನಾ ಪ್ರಧಾನಿ ಲಿ ಕೇಕ್ವಿಂಗ್
ಬೀಜಿಂಗ್: ಈ ವರ್ಷ ನಿರೀಕ್ಷೆಗಿಂತಲೂ ಚೈನಾದ ಆರ್ಥಿಕ ಸ್ಥಿತಿ ವೃದ್ಧಿಸಿದೆ ಎಂದು ಚೈನಾ ಪ್ರಧಾನಿ ಲಿ ಕೇಕ್ವಿಂಗ್ ಮಂಗಳವಾರ ಹೇಳಿದ್ದಾರೆ. ಉದ್ಯೋಗಳು ಹೆಚ್ಚಿದ್ದು, ಪ್ರಾದೇಶಿಕ ಬಳಕೆ ಮತ್ತು ಸೇವಾ ಉದ್ದಿಮೆ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿದೆ ಎಂದು ಅವರು ಹೇಳಿದ್ದಾರೆ. 
"ಸಮಗ್ರವಾಗಿ, ಈ ವರ್ಷ, ಅದರಲ್ಲೂ ಮೂರನೇ ತ್ರೈಮಾಸಿಕದಲ್ಲಿ, ಆರ್ಥಿಕತೆ ನಿರೀಕ್ಷೆಗಿಂತಲೂ ವೃದ್ಧಿಸಿದೆ" ಎಂದು ಕಾರ್ಯಕ್ರಮವೊಂದರಲ್ಲಿ ಲಿ ಹೇಳಿದ್ದಾರೆ.
ಈ ಹಿಂದೆ ಕುಂಠಿತವಾಗಿದ್ದ ಪ್ರಾದೇಶಿಕ ಬಳಕೆ ಮತ್ತು ಸೇವಾ ಉದ್ದಿಮೆ ಈಗ ಪ್ರಗತಿಗೊಂಡಿದ್ದು, ಆರ್ಥಿಕ ಅಭಿವೃದ್ಧಿಗೆ ಸಹಕರಿಸಿವೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. 
ಈ ವರ್ಷದ ಮೊದಲ 9 ತಿಂಗಳುಗಳಲ್ಲಿ, ನಗರಗಳು ಮತ್ತು ಪಟ್ಟಣಗಳಲ್ಲಿ 10 ದಶಲಕ್ಷ ಉದ್ಯೋಗಗಳನ್ನು ಚೈನಾ ಸೃಷ್ಟಿಸಿದೆ. 31 ಅತಿ ದೊಡ್ಡ ನಗರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸೆಪ್ಟೆಂಬರ್ ನಲ್ಲಿ ನಿರುದ್ಯೋಗ ಕನಿಷ್ಠ 5% ಇಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಹೀಗಾಗಿರುವುದು ಇದೆ ಮೊದಲು ಎಂದು ಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com