ಅಮೆರಿಕ ನೂತನ ಅಧ್ಯಕ್ಷರಾದವರು 100 ದಿನದೊಳಗಾಗಿ ಪ್ರಧಾನಿ ಮೋದಿಯನ್ನು ಭೇಟಿಯಾಗಲೇಬೇಕು!

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು ಅಧ್ಯಕ್ಷರಾಗಿ ಚುನಾಯಿತಕೊಂಡ ಅಧ್ಯಕ್ಷರು 100 ದಿನಗಳೊಳಗಾಗಿ ಭಾರತದ...
ಟ್ರಂಪ್-ಕ್ಲಿಂಟನ್
ಟ್ರಂಪ್-ಕ್ಲಿಂಟನ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು ಅಧ್ಯಕ್ಷರಾಗಿ ಚುನಾಯಿತಕೊಂಡ ಅಧ್ಯಕ್ಷರು 100 ದಿನಗಳೊಳಗಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕು ಎಂದು ಅಮೆರಿಕದ ವಿಚಾರ ವೇದಿಕೆ ಸಲಹೆ ನೀಡಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ-ಅಮೆರಿಕ ಸಂಬಂಧ ವೃದ್ಧಿಸಿದೆ. ಇದನ್ನು ಮುಂದುವರೆಸುವ ಅವಶ್ಯಕತೆಯಿಂದ ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬೇಕು. ಉಭಯ ದೇಶಗಳ ಭದ್ರತಾ ಬಾಂಧವ್ಯ ವೃದ್ಧಿಗೆ ಭಾರತದೊಂದಿಗೆ ಒಪ್ಪಂದಗಳಿಗೆ ಆದಷ್ಟು ಬೇಗ ಸಹಿ ಮಾಡಬೇಕು ಎಂದು ಹೇಳಿದೆ.

ಕೇಂದ್ರೀಯ ತಂತ್ರ ಮತ್ತು ಅಂತಾರಾಷ್ಟ್ರೀ ಅಧ್ಯಯನ ನೀಡಿದ ಭಾರತ-ಅಮೆರಿಕ ಭದ್ರತಾ ಸಹಕಾರ ಎಂಬ ವರದಿಯಲ್ಲಿ ಅಮೆರಿಕ ವಿಚಾರ ವೇದಿಕೆ ಈ ಸಲಹೆ ನೀಡಿದೆ. ಭಾರತ ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದು ಅಮೆರಿಕೊಂದಿಗೆ ಕೆಲ ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಒಂದು ವೇಳೆ ಇದು ನೆರವೇರದಿದ್ದಲ್ಲಿ ಆತ್ಯಾಧುನಿಕ ಉಪಕರಣಗಳು, ಕಂಪ್ಯೂಟರ್ ಹಾಗೂ ಸಂವಹನ ತಂತ್ರಜ್ಞಾನವನ್ನು ಅಮೆರಿಕ ಭಾರತಕ್ಕೆ ಪೂರೈಸುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com