3ನೇ ಮಹಾಯುದ್ಧಕ್ಕೆ ಅಣಿಯಾಗುತ್ತಿದೆಯೇ ರಷ್ಯಾ?: ವರದಿ
ಮಾಸ್ಕೋ: ರಷ್ಯಾ ಸರ್ಕಾರ ವಿಶ್ವದಾದ್ಯಂತ ನೆಲೆಸಿರುವ ತನ್ನ ಪ್ರಜೆಗಳನ್ನು ಆದಷ್ಟು ಬೇಗ ಸ್ವದೇಶಕ್ಕೆ ಮರುಳುವಂತೆ ಸೂಚಿಸಿದ್ದು, ರಷ್ಯಾ ಮೂರನೇ ಮಹಾಯುದ್ಧದ ಸಿದ್ಧತೆಯಲ್ಲಿರುವಂತೆ ಕಂಡುಬಂದಿದೆ ಎಂದು ಬ್ರಿಟನ್ ನ ಪ್ರಮುಖ ಟ್ಯಾಬ್ ಲಾಯ್ಡ್ ದಿ ಸನ್ ಪತ್ರಿಕೆ ವರದಿ ಮಾಡಿದೆ.
ವಿಶ್ವ ಮಟ್ಟದಲ್ಲಿನ ಉದ್ವಿಗ್ನತೆ ಹಾಗೂ ಬಿಕ್ಕಟ್ಟು ಮೂರನೇ ಮಹಾಯುದ್ಧದ ಸಂಭವಿಸುವ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ಸನ್ನದ್ಧತೆಯ ಆದೇಶವನ್ನು ನೀಡಿರುವುದಾಗಿ ಪತ್ರಿಕೆ ಹೇಳಿದೆ.
ಅಣ್ವಸ್ತ್ರ ಯುದ್ಧದ ಸಂಭಾವ್ಯತೆಯ ಹಿನ್ನೆಲೆಯಲ್ಲಿ ರಷ್ಯಾ ತನ್ನ ನಾಲ್ಕು ಕೋಟಿ ಪ್ರಜೆಗಳಿಗೆ ರಕ್ಷಣಾ ಒದಗಿಸಿದ ಬಳಿಕ ಮಹಾಯುದ್ಧದ ಸಿದ್ಧತೆಯಲ್ಲಿ ತೊಡಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ವಿದೇಶಗಳಲ್ಲಿ ನೆಲೆಸಿರುವ ತನ್ನ ಎಲ್ಲಾ ಅಧಿಕಾರಿಗಳಿಗೆ ತಮ್ಮ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ದೇಶಕ್ಕೆ ಮರಳುವಂತೆ ಆದೇಶಿಸಿರುವುದಾಗಿ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದ್ದು, ಖುದ್ಧು ಪುಟಿನ್ ಅವರೇ ರಾಜಕಾರಣಿಗಳು ಮತ್ತು ಉನ್ನತ ಪಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ.
ಸಿರಿಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾದ್ಲಿಮಿರ್ ಪುಟಿನ್ ಅವರು ದಿಢೀರ್ ಆಗಿ ತಮ್ಮ ಫ್ರಾನ್ಸ್ ಭೇಟಿಯನ್ನು ರದ್ದುಪಡಿಸಿರುವುದು ಕೂಡ ಹಲವು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ವರದಿ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ