ಭಾರತೀಯ ಅಮೆರಿಕನ್ನರಿಗೇಕೆ ಟ್ರಂಪ್ ಗಿಂತ ಹಿಲರಿ ಮೇಲೆ ಹೆಚ್ಚು ಒಲವು?

ಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗಿಂತ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಗೆ ಹೆಚ್ಚು ಬೆಂಬಲ...
ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್
ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್
Updated on

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗಿಂತ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಗೆ ಹೆಚ್ಚು ಬೆಂಬಲ ಸೂಚಿಸುತ್ತಿದ್ದಾರೆ.

ಐತಿಹಾಸಿಕವಾಗಿ ಭಾರತೀಯ ಅಮೆರಿಕನ್ನರು, ಏಷಿಯನ್ ಅಮೆರಿಕನ್ನರು ಸೇರಿದಂತೆ ಇತರೆ ವಲಸೆ ಸಮುದಾಯದವರು ಹೆಚ್ಚಾಗಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಹಿಲರಿ ಬೆಂಬಲಿಗ ಫ್ರಾಂಕ್ ಇಸ್ಲಾಮ್ ಅಭಿಪ್ರಾಯ ಪಟ್ಟಿದ್ದಾರೆ.

ಹಲವು ದಶಕಗಳಿಂದ ಹಿಲರಿ ಮಧ್ಯಮದ ವರ್ಗದ ಜನತೆಯ ಚ್ಯಾಂಪಿಯನ್ ಆಗಿದ್ದಾರೆ. ಒಬ್ಬ ಅಧ್ಯಕ್ಷೆಯಾಗಿ ಅವರ ಉತ್ತಮ ನೌಕರಿ ಹಾಗೂ ಜನತೆಗೆ ಉತ್ತಮ ಆರೋಗ್ಯ ಒದಗಿಸಬಲ್ಲರು. ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದ್ದಾರೆ. ಎರಡು ದೇಶಗಳ ವಿದೇಶಾಂಗ ನೀತಿಯನ್ನು ಮತ್ತಷ್ಟು ಆರೋಗ್ಯಕರವಾಗಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಶೇ.70 ರಷ್ಟು ಭಾರತೀಯ ಅಮೆರಿಕನ್ನರು ಹಿಲರಿಗೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಅವರ ಗೆಲುವು ನಿಶ್ಚಿತ . ಹಿಲರಿ ಕ್ಲಿಂಟನ್ ಪ್ರತಿಯೊಬ್ಬ ಪ್ರಜೆಯನ್ನು ತಲುಪಲು ಬಯಸುತ್ತಾರೆ. ಭಾರತದೊಂದಿಗೆ ಆಕೆ ನಿಜವಾದ ಸ್ನೇಹ ಸಂಬಂಧ ಬೆಳೆಸುತ್ತಾರೆ. ಎರಡು ದೇಶಗಳ ಸ್ನೇಹ ಸಂಬಂಧವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತಾರೆ.

1992 ರಿಂದಲೂ ಎಲ್ಲಾ ಅಧ್ಯಕ್ಷರಿದ್ದಾಗಲೂ ಭಾರತದ ಜೊತೆ ಅತಿ ಉತ್ತಮ ಸಂಬಂಧ ಬೆಳೆದು ಬಂದಿದೆ, ಮುಂದೆಯು ಹಿಲರಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.

ವ್ಯಾಪಾರ, ಆರ್ಥಿಕ ಸಹಭಾಗಿತ್ವ, ರಕ್ಷಣೆ, ಭಯತ್ಪಾದನೆ ನಿಗ್ರಹ, ವಾತಾವರಣ ಬದಲಾವಣೆ, ಸೇರಿದಂತೆ ಹಲವು ಜಾಗತಿಕ ಸಮಸ್ಯೆಗಳ ಬಗ್ಗೆ ಗಮನ ಕೇಂದ್ರಿಕರಿಸಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com