ಅಮೆರಿಕ ಅಧ್ಯಕ್ಷರ ವೈಯಕ್ತಿಕ ಇ-ಮೇಲ್ ಖಾತೆಗೂ ಕನ್ನ?

ಭಾರತದಲ್ಲಿ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾದ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಅನ್ನು ಕೂಡ ಹ್ಯಾಕ್ ಮಾಡಲಾಗಿದೆ ಎಂದು ವಿಕಿಲೀಕ್ಸ್ ಸಂಸ್ಥೆ ಹೇಳಿದೆ.
ವಿಕಿಲೀಕ್ಸ್ ಹಾಗೂ ಬರಾಕ್ ಒಬಾಮ (ಸಂಗ್ರಹ ಚಿತ್ರ)
ವಿಕಿಲೀಕ್ಸ್ ಹಾಗೂ ಬರಾಕ್ ಒಬಾಮ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಭಾರತದಲ್ಲಿ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾದ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್  ಅನ್ನು ಕೂಡ ಹ್ಯಾಕ್ ಮಾಡಲಾಗಿದೆ ಎಂದು ವಿಕಿಲೀಕ್ಸ್ ಸಂಸ್ಥೆ ಹೇಳಿದೆ.

ಈ ಬಗ್ಗೆ ಸ್ವತಃ ವಿಕಿಲೀಕ್ಸ್ ಸಂಸ್ಥೆ ಟ್ವೀಟ್ ಮಾಡಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಹ್ಯಾಕ್ ಆಗಿದ್ದು, ಅವರ ಕೆಲ ವೈಯುಕ್ತಿಕ ಇಮೇಲ್ ಮಾಹಿತಿ  ಸೋರಿಕೆಯಾಗಿದೆ ಎಂದು ಹೇಳಿದೆ. bobama@ameritech.net ನ ಕೆಲ ಮಹತ್ವದ ಟ್ವೀಟ್ ಗಳು ಸೋರಿಕೆಯಾಗಿದೆ ಎಂದು ವಿಕಿಲೀಕ್ಸ್ ಹೇಳಿದ್ದು, ಈ ಬಗ್ಗೆ ಕೆಲ ಇಮೇಲ್ ಗಳನ್ನು ಕೂಡ  ವಿಕಿಲೀಕ್ಸ್ ಸಂಸ್ಥೆ ಜಾಹಿರು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com